ಮೂಡುಬಿದಿರೆ: ಗುತ್ತಿಗೆದಾರ ಜಯ ಮೇಸ್ತ್ರಿ ನಿಧನ

ಮೂಡುಬಿದಿರೆ: ಇಲ್ಲಿನ ಪ್ರಸಿದ್ಧ ಕಟ್ಟಡಗಳ ಹಾಗೂ ಹಲವಾರು ಖ್ಯಾತನಾಮರ ಮನೆಗಳ ಕೆಲಸಗಳನ್ನು ಎಂಜಿನಿಯರ್ ನಂತೆ ಅಚ್ಚುಕಟ್ಟಾಗಿ ನಿಮಿ೯ಸಿ ಕೊಟ್ಟು ಜಯ ಮೇಸ್ತ್ರಿ ಎಂದೇ ಮೂಡುಬಿದಿರೆ ಪರಿಸರದಲ್ಲಿ ಖ್ಯಾತರಾಗಿದ್ದ ಸಂಪಿಗೆ ಕೋಂಟಡ್ಕ ನಿವಾಸಿ ಜಯ ಗೌಡ (68) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಇತ್ತೀಚೆಗೆ ಮೂಡುಬಿದಿರೆ ಕನ್ನಡಭವನದಲ್ಲಿ ನಡೆದಿದ್ದ ‘ತುಳುವೆರ್ ಬೆದ್ರ’ ಸಂಘಟನೆಯ ನಾಟಕ ಪ್ರದರ್ಶನ ವೇಳೆ ಜಯ ಮೇಸ್ತ್ರಿ ಅವರನ್ನು ಸನ್ಮಾನಿಸಲಾಗಿತ್ತು.ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.