21ರ ಪ್ರಾಯದ ಶುಭಕರಣ್ ಸಿಂಗ್ ಎರಡು ಎಕರೆ ಹೊಲ ಹೊಂದಿದ್ದಾನೆ. ತಂಗಿಯ ಮದುವೆಗಾಗಿ ಸಾಲ ಮಾಡಿದ್ದ. ಈಗ ರೈತರ ಚಳವಳಿಯಲ್ಲಿ ದಿಲ್ಲಿ ಹರಿಯಾಣ ಗಡಿಯಲ್ಲಿ ಸರಕಾರದ ರೈತ ಚಳವಳಿ ಹತ್ತಿಕ್ಕುವ ಹೋರಾಟದಲ್ಲಿ ಬಲಿಯಾಗಿದ್ದಾನೆ.ಪಂಜಾಬದ ಭಟಿಂಡಾ ಜಿಲ್ಲೆಯ ಬಾಲೋಕ್ ಗ್ರಾಮದ ಯುವಕ ರೈತನಿವನು. ಈಗ ಪೋಲೀಸರ ದಾಳಿಯಲ್ಲಿ ರೈತರ ಪ್ರಕಾರ ಕೊಲೆಯಾಗಿದ್ದಾನೆ. ಸರಕಾರ ಸರಿಯಾದ ಪರಿಹಾರ
ಲಂಡನ್ : ಇಂಗ್ಲೆಂಡಿನಲ್ಲಿ ಭಾರತೀಯ ಮೂಲದ 36ರ ವಿಘ್ನೇಶ್ ಪಟ್ಟಾಭಿರಾಮನ್ ಎಂಬವರ ಸಾವು ಆಗಿದೆ. ಸೈಕಲಿನಲ್ಲಿ ಮನೆಗೆ ಹೋಗುವಾಗ ಅಪಘಾತವಾಗಿ ಸಾವಾಗಿದೆ ಎಂದು ಒಂದು ವರದಿ ಹೇಳಿದರೆ ಇನ್ನೊಂದು ಅದು ಕೊಲೆ ಎಂದು ವರದಿ ಮಾಡಿದೆ.ಬ್ರಿಟನ್ನಿನ ವೆಲ್ ರೀಡಿಂಗ್‌ನಲ್ಲಿ ಹೋಟೆಲೊಂದರ ಮ್ಯಾನೇಜರ್ ಆಗಿ ವಿಘ್ನೇಶ್ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವಾಗ ಹೋಟೆಲಿಗೆ ಹತ್ತಿರದ ಪ್ಲೇಸ್ ಜಂಕ್ಷನ್‌ನಲ್ಲಿ ಸೈಕಲಿನಿಂದ ಅವರು ಬಿದ್ದು ಮೃತರಾಗಿದ್ದಾರೆ. ಬೀಳಲು
ಮಂಗಳೂರು: ನಗರದ ಹಂಪನ ಕಟ್ಟೆಯ ಜುವೆಲ್ಯರಿಯೊಂದರಲ್ಲಿ ಕಳೆದ ಶುಕ್ರವಾರ ಹಾಡುಹಗಲೇ ನಡೆದ ಸಿಬ್ಬಂದಿ ಕೊಲೆ, ಅಂಗಡಿ ದರೋಡೆ ಪ್ರಕರಣದ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ಶಂಕಿತ ಆರೋಪಿಯ ಸಿಸಿ ಕೆಮರಾ ಚಿತ್ರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಕಪ್ಪು ಬಣ್ಣದ ಜರ್ಕಿನ್, ಜೀನ್ಸ್ ಪ್ಯಾಂಟ್ ಧರಿಸಿ, ಶೂ ಧರಿಸಿದ್ದು, ಹೆಗಲಿನಲ್ಲಿ ಬ್ಯಾಗ್ ಹಾಕಿಕೊಂಡಿದ್ದು, ಗುರುತು ಮರೆಮಾಚಲು ಕ್ಯಾಪ್, ಮಾಸ್ಕ್, ಕೂಲಿಂಗ್
ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ನಗರದಲ್ಲಿರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ. ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ. ಜುವೆಲ್ಲರಿ ಮಾಲಕ ಊಟಕ್ಕೆಂದು ತೆರಳಿದ್ದಾಗ ಆಗಂತುಕ ಒಳಗೆ ಬಂದಿದ್ದ.
ಪತ್ನಿಯನ್ನು ಆರೋಪಿ ಪತಿ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎಕ್ಕಾರು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಆರೋಪಿ ಪತಿಯ ಬಂಧನವಾಗಿದೆ. ತೆಂಕ ಎಕ್ಕಾರು ಗ್ರಾಮದ ಪಲ್ಲದಕೋಡಿ ನಿವಾಸಿ ಸರಿತಾ(35) ಕೊಲೆಯಾದ ಮಹಿಳೆ. ಆರೋಪಿ ಪತಿ ದುರ್ಗೇಶ ಎಂಬಾತ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿ ಸರಿತಾ ಜತೆ ಜಗಳವಾಡಿದ್ದನೆನ್ನಲಾಗಿದೆ. ಈ ವೇಳೆ ಮರದ ರೀಪಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ
ಮಂಗಳೂರು: ಹಣತೆ ವ್ಯಾಪಾರಕ್ಕಾಗಿ ಮಂಗಳೂರು ನಗರಕ್ಕೆ ಬಂದಿದ್ದ ತಮಿಳುನಾಡಿನ ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣದಾಸೆಗೆ ಕೊಲೆಗೈದ ಪ್ರಕರಣ ತಡವಾಗಿ ಬಂದಿದ್ದು, ಈ ಸಂಬಂಧ ಆರೋಪಿ ಹೂವಿನ ಹಡಗಲಿ ನಿವಾಸಿ ರವಿ ಯಾನೆ ವಕೀಲ್ ನಾಯ್ಕ್ (42) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ಮಾಯವೇಳ್ ಪೆರಿಯಸಾಮಿ ಅವರ ಮೃತ ದೇಹದ ಅವಶೇಷಗಳಾದ ತಲೆಬುರುಡೆ, ಮೂಳೆ ಇತ್ಯಾದಿಗಳು ಕೂಳೂರು ಮೈದಾನದ ಬಳಿ ಪತ್ತೆಯಾಗಿವೆ. ಹಣತೆಯನ್ನು ಮಾಯಾವೇಳ್
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಕೊಲೆ ದೃಶ್ಯವು ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಲೆಯಾದವರನ್ನು ಕಾರ್‌ಸ್ಟ್ರೀಟ್‌ನ ಮಹಮ್ಮಾಯಿ ದೇವಸ್ಥಾನ ರಸ್ತೆಯಲ್ಲಿರುವ ವೀರ ವೆಂಕಟೇಶ್ ಎಂಬ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ ಕಾಮತ್ ಎಂದು ಗುರುತಿಸಲಾಗಿದೆ. ಇವರು ಕರಂಗಲ್ಪಾಡಿಯಲ್ಲಿರುವ ಟ್ರಾವೆಲ್ಸ್ ವೊಂದರಲ್ಲಿ
ಕುಂದಾಪುರ: ಇಲ್ಲಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅಂಪಾರಿನಲ್ಲಿ ಮಂಗಳವಾರದಂದು ಬೆಳಕಿಗೆ ಬಂದಿದ್ದ ವಿವಾಹಿತನೋರ್ವನ ಆತ್ಮಹತ್ಯೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಂಪಾರು ಗ್ರಾಮದ ಮೂಡುಬಗೆಯ ವಿವೇಕ ನಗರದ ನಿವಾಸಿ ನಾಗರಾಜ (36) ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಅವರ ಪತ್ನಿ ಸೇರಿದಂತೆ ಐವರನ್ನು ಶಂಕರನಾರಾಯಣ ಪೊಲೀಸರು ಬಂಧಿಸುವಲ್ಲಿ
ನಗರದ ಪಂಪ್‌ವೆಲ್ ಬಳಿ ಲಾಡ್ಜ್ ಒಂದರಲ್ಲಿ ಯುವಕನ ಕೊಲೆಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಪಚ್ಚನಾಡಿ ನಿವಾಸಿ ಧನುಷ್ ಎಂದು ಗುರುತಿಸಲಾಗಿದ್ದು, ಗೆಳೆಯರೊಂದಿಗೆ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ತೆರಳಿದಾಗ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ದಸರಾ ಹಬ್ಬದ ಪ್ರಯುಕ್ತ ಪಾರ್ಟಿ ಮಾಡುವ ಉದ್ದೇಶದಿಂದ ಪಂಪ್‌ವೆಲ್ ಬಳಿಯ ಲಾಡ್ಜ್ ಒಂದಕ್ಕೆ ಪ್ರಮೀತ್, ಜೈಸನ್, ಕಾರ್ತಿಕ್, ಧನುಷ್, ದುರ್ಗೇಶ್ ಮತ್ತು ಪ್ರಜ್ವಲ್
ಅರಕಲಗೂಡು: ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮೃತದೇಹವನ್ನು ತಾಲೂಕಿನ ಮಲ್ಲಾಪುರ ಬಳಿ ಲಕ್ಕೂರು ಅರಣ್ಯ ಪ್ರದೇಶದಲ್ಲಿ ಎಸೆದಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಜಗದೀಶ್ ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ,ಮೃತದೇಹದ ಪಕ್ಕದಲ್ಲಿ ಆಟೋ ನಿಲ್ಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಕೊಣನೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ