ಮಂಜೇಶ್ವರ : ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಕೆಲವು ದಿನಗಳಿಂದ ನಾಪತ್ತೆಯಾಗಿ ಚೆಂಬುಗುಡ್ಡೆಯ ಯುವಕನ ಶವ ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದ್ದು, ಇದು ಆಕಸ್ಮಿಕ ಸಾವಲ್ಲ ಇದೊಂದು ಕೊಲೆ ಇದೊಂದು ಕೊಲೆ ಎಂಬುವ ಶಂಕೆ ಕುಟುಂಬಸ್ಥರಿಂದ ವ್ಯಕ್ತಗೊಂಡಿದೆ. ಮೀನು ವ್ಯಾಪಾರಿಯಾಗಿದ್ದ ತೊಕ್ಕೊಟ್ಟು ಸಮೀಪದ ಚೆಂಬುಗಡ್ಡೆಯ ನಿವಾಸಿ ಝಾಕಿರ್ ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಶನಿವಾರ ಸಂಜೆ ಮಂಜೇಶ್ವರ ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೀನು ವ್ಯಾಪಾರಿಯಾಗಿದ್ದ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ನಿವಾಸಿ ಝಾಕಿರ್ ಅವರಿಗೆ ಪತ್ನಿ, ಏಳು ವರ್ಷದ ಮಗ ಇದ್ದು, ಪತ್ನಿ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.

ಶಾಂತ ಸ್ವಭಾವದ ಮೂಲಕ ಪರಿಸರದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರು, ಕಳೆದ ತಿಂಗಳು 26ರಂದು ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ನಂತರ ಹಿಂದಿರುಗಿ ಬಂದಿರಲಿಲ್ಲ. ಮೊಬೈಲ್ ರಿಂಗ್ ಆಗಿ ಸ್ವಿಚ್ಛ್ ಆಫ್ ಆಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನವಿ ಮಾಡಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಎಲ್ಲಾ ಫೂಟೆಜ್‍ಗಳನ್ನು ಠಾಣಾಧಿಕಾರಿಗೆ ನೀಡಲಾಗಿದ್ದೆ. ಹಾಗೂ ಮತ್ತೊಮ್ಮೆ ಮೃತದೇವನ್ನು ಚೆಂಬುಗುಡ್ಡೆಯ ಝಾಕಿರ್ ನಿವಾಸಕ್ಕೆ ತಂದು ಮರು ಅಂತ್ಯ ಸಂಸ್ಕಾರ ಮಾಡುವುದ್ದಾಗಿ ಝಾಕಿರ್ ಸಹೋದರ ಅಶ್ರಫ್ ಹರೇಕಳ ತಿಳಿಸಿದ್ದಾರ