ದೇಶದ 38ಕೋಟಿ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ : ಸಚಿವ ರಾಮೇಶ್ವರ ತೆಲಿ

ಮಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷತೆಗಾಗಿ ಇ ಶ್ರಮ್ ಕಾರ್ಡ್ ದೇಶದ 38ಕೋಟಿ ಕಾರ್ಮಿಕರಿಗೆ ನೀಡಲು ಗುರಿ ಹೊಂದಲಾಗಿ ದೆ.ಇದುವರೆಗೆ 28ಕೋಟಿ ಕಾರ್ಮಿಕರ ನೋಂದಣಿ ಮಾಡಲಾಗಿದೆ ಎಂದು ಕೇಂದ್ರ ಸರಕಾರದ ಪೆಟ್ರೋಲಿಯಂ, ನೈಸರ್ಗಿಕ ಅನಿಲ,ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಹಾಯಕ ಸಚಿವ ರಾಮೇಶ್ವರ ತೆಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯ ಮೂಲಕ ಜನರ ಜೀವನದಲ್ಲಿ ಸುಧಾರಣೆ ಯಾಗಿದೆ.ಮೊದಲ ಅನಿಲ ಉಚಿತ ಮರು ಪೂರಣ ಉಚಿತ ಒಲೆ ಸಹಿತ ಸಂಪರ್ಕ ನೀಡಲು ಹೆಚ್ಚು ವರಿ ಒಂದೂವರೆ ಕೋಟಿ ಎಲ್ಪೀಜಿ ಸಂಪರ್ಕ ವನ್ನು ದೇಶಾದ್ಯಂತ ಒದಗಿಸಲು ಉಜ್ವಲ 2.0 ಯೋಜನೆ ಯನ್ನು ಈಗಾಗಲೇ ಆರಂಭಿಸಲಾಗಿದೆ.2021-22ನೆ ಸಾಲಿನಲ್ಲಿ 51,18,089 ಎಲ್ಫೀಜಿ ಮರು ಪೂರಿತ ಸಿಲಿಂಡರ್ಗಳನ್ನು ಖರೀದಿ ಸಲು ಕರ್ನಾಟಕದ 30,38,018 ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆ ಗಳಿಗೆ 378.31 ಕೋಟಿ ರೂಗಳನ್ನು ವರ್ಗಾಯಿ ಸಲಾಗಿದೆ ಎಂದು ಸಚಿವ ರಾಮೇಶ್ವರ ತೆಲಿ ತಿಳಿಸಿದ್ದಾರೆ.

ಎಂಆರ್ ಪಿ ಎಲ್ ನಲ್ಲಿಂದು ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಯೋಜನೆ ಮತ್ತು ಫಲಾನು ಭವಿಗಳಿಗೆ ಇ-ಶ್ರಮ ಕಾರ್ಡ್ ವಿತರಿಸಿ ಮಾತನಾಡುತ್ತಿದ್ದರು.ಸಾಮಾಜಿಕ ಸುರಕ್ಷತೆಗಾಗಿ ಈಗಾಗಲೇ ಸರಕಾರ ವಿತರಿಸಿರುವ ಆಯುಷ್ಮಾನ್ ಕಾರ್ಡ್ ಜೊತೆ ಸಂಯೋಜಿಸಲು ಚಿಂತನೆ ನಡೆಸಲಾಗುವುದು ಎಂದರು.ದೇಶದಲ್ಲಿ ಇರುವ 597 ಜಿಲ್ಲೆ ಗಳ ಇಎಸ್‍ಐ ಆಸ್ಪತ್ರೆಗಳ ನ್ನು ನವೀಕರಣ ಗೊಳಿಸುವ ಯೋಜನೆ ಸರಕಾರ ಹಮ್ಮಿಕೊಂಡಿದೆಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಎಂಆರ್ ಪಿಎಲ್ ನ ಮೂರು ಸಾವಿರ ಕೋಟಿ ವೆಚ್ಚದ ಮಾರುಕಟ್ಟೆ ಸಂಕೀರ್ಣ ದ ಶಂಕುಸ್ಥಾಪನೆ ಯನ್ನು ನೆರವೇರಿಸಿದರು. ದೇಶದ ಪ್ರಮುಖ ತೈಲ ಸಂಸ್ಕರಣಾ ಸಂಸ್ಥೆ ಯಾದ ಒಎನ್ ಜಿಸಿ ಎಂಆರ್ ಪಿಎಲ್ ಮೂಲಕ 2025ರಲ್ಲಿ 119 ನೂತನ ಸಗಟು ಮಳಿಗೆಗಳನ್ನು ತೆರೆಯಲಾಗುವುದು ಎಂದು ಸಚಿವ ರಾಮೇಶ್ವರ ತೆಲಿ ತಿಳಿಸಿದರು.ಕಾರ್ಮಿಕ ಇಲಾಖೆಯ ಸಹಾಯಕ ಕಮೀಷನರ್ ಶ್ರೀನಿವಾಸಶೆಟ್ಟಿ ಮಾತನಾಡುತ್ತಾ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.15ಲಕ್ಷ ಇ ಶ್ರಮ್ ಕಾರ್ಡ್ ವಿತರಣೆ ಮಾಡಲಾಗಿದೆ.70ಲಕ್ಷ 80ಸಾವಿರ ಮಂದಿ ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ , ನಿರ್ದೇಶಕ ಸಂಜಯ್ ವರ್ಮ,ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್, ಎಸ್.ಪಿ.ಕಾಮತ್,ಐಒಸಿಎಲ್ (ಇ.ಡಿ )ಅಧಿಕಾರಿ ಗುರು ಪ್ರಸಾದ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಚಿವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 21 ಮಂದಿ ಫಲಾನುಭವಿಗಳಿಗೆ ಸೌಲಭ್ಯ ವನ್ನು ವಿತರಿಸಿದರು.

Related Posts

Leave a Reply

Your email address will not be published.