ಮಂಗಳೂರು: ಲೋಟಸ್ ಬಿಲ್ಡರ್ಸ್‌ನ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಹಲ್ಲೆಗೆ ಯತ್ನ: ಇಬ್ಬರ ಸೆರೆ
ಮಂಗಳೂರಿನ ಪ್ರಖ್ಯಾತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಅವರ ಮನೆಗೆ ಇಬ್ಬರು ಯುವಕರು ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಮಾಹಿತಿ ಪಡೆದ ಬರ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕರನ್ನು ಬಂಧಿಸಿದ್ದಾರೆ.
ಖ್ಯಾತ ಬಿಲ್ಡರ್ ಲೋಟಸ್ ಪ್ರಾಪರ್ಟೀಸ್ ಪಾಲುದಾರ ಹಾಗೂ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಏರ್ಪೋರ್ಟಿನಿಂದ ಕಾರಿನಲ್ಲಿ ಬರುತ್ತಿರುವಾಗ ಈ ಯುವಕರ ಕಾರನ್ನು ಓವರ್ ಟೇಕ್ ಮಾಡಿ ಬಂದಿದ್ದರು. ಇದೇ ಕಾರಣಕ್ಕೆ ಕೋಪದಿಂದ ಕೊಟ್ಟಾರಿ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಯುವಕರು ಕೊಡಿಯಾಲಬೈಲಿನ ಮನೆಗೆ ತಲುಪಿದಾಗ ಕೊಟ್ಟಾರಿ ಕಾರನ್ನು ಕಾಂಪೌಂಡ್ ಒಳಗಡೆ ತಂದು ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪತ್ನಿಯ ಮೇಲೆ ಕೈಮಾಡಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಕೂಡಲೇ ಕೊಟ್ಟಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಬರ್ಕೆ ಪೊಲೀಸರು ಬಂದು ಇಬ್ಬರನ್ನು ಅರೆಸ್ಟ್ ಮಾಡಿ ಪ್ರಕರಣ ದಾಖಲಿದ್ದಾರೆ.