ಚುನಾವಣಾ ಅಕ್ರಮ ತಡೆಗೆ ಕ್ರಮ : ಮೂಡುಬಿದರೆ ಚುನಾವಣಾಧಿಕಾರಿ ಕೆ.ಮಹೇಶ್ಚಂದ್ರ ಹೇಳಿಕೆ

ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಅಳವಡಿಸಲಾಗಿರುವ ಬಂಟಿಂಗ್ಸ್ ಬ್ಯಾನರ್ ಗಳನ್ನು ತೆಗೆಸುವ ಕ್ರಮ ಕೈಗೊಳ್ಳಲಾಗಿದೆ, ಯಾವುದೇ ಕಾರ್ಯಕ್ರಮ ನಡೆಸುವಲ್ಲಿ ಅನುಮತಿ ಪಡೆದುಕೊಂಡೇ ನಡೆಸಬೇಕು, ರಾಜಕಾರಣಿಗಳು, ಚುನಾಯಿತ ಸದಸ್ಯರು ವೇದಿಕೆಯೇರಿ ಭಾಷಣ ಮಾಡುವಂತಿಲ್ಲ. ಯಾವುದೇ ಭರವಸೆ ನೀಡುವುದಾಗಲೀ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡುವು ದಾಗಲೀ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳ ಲಾಗುವುದೆಂದು ಚುನಾವಣಾ ಅಧಿಕಾರಿಯಾಗಿರುವ ಕೆ.ಮಹೇಶಚಂದ್ರ ಅವರು ಮಾಹಿತಿ ನೀಡಿದರು.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 2023 ಜನವರಿ 5 ರಂತೆ ಒಟ್ಟು 2,00,303 ಮತದಾರರಿದ್ದು ಅದರಲ್ಲಿ 1,03,514 ಗಂಡಸರು, 96,784 ಹೆಂಗಸರು, 5 ಮಂದಿ ತೃತೀಯ ಲಿಂಗಿಗಳಿದ್ದಾರೆ ಎಂದು 5858 ಮಂದಿ 80 ವರ್ಷ ಮೇಲ್ಪಟ್ಟ ಮತದಾರರಿದ್ದು, 1491 ಮಂದಿ ಅಂಗವಿಕಲ ಮತದಾರರಿದ್ದಾರೆ. ಮೂಲ್ಕಿ ಬೆಳುವಾಯಿ ಹಾಗೂ ಮಾರೂರಿನಲ್ಲಿ ಚೆಕ್ ಪೆÇೀಸ್ಟ್ ಗಳನ್ನು ಹಾಕಲಾಗಿದ್ದು ಪ್ರತೀ ತಂಡದಲ್ಲೂ ತಪಾಸಣಾಧಿಕಾರಿ ಗಳಿದ್ದಾರೆಂದು ಅವರು ಮಾಹಿತಿ ನೀಡಿದರು. ಒಟ್ಟು 221 ಮತದಾನ ಕೇಂದ್ರಗಳಿದ್ದು, 22 ಮಂದಿ ಸೆಕ್ಟರ್ ಅಧಿಕಾರಿಗಳಿರುತ್ತಾರೆ,ಸಹಾಯಕ ಚುನಾವಣಾಧಿಕಾರಿಗಳಾಗಿ ಮೂಡು ಬಿದಿರೆ ತಹಶಿಲ್ದಾರ್ ಸಚ್ಚಿದಾನಂದ ಕುಚನೂರು, ಮೂಲ್ಕಿ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಮಂಗಳೂರು ತಹಶಿಲ್ದಾರ್ ಪ್ರಶಾಂತ್ ಪಾಟೀಲ್ ಸಹಕರಿಸಲಿದ್ದಾರೆ ಎಂದು ಅವರು ತಿಳಸಿದರು.

,ನಮ್ಮ ಅಧಿಕಾರಿಗಳ ತಂಡ ಯಾವುದೇ ಸಮಸ್ಯೆ ಇಲ್ಲದೆ ಚುನಾವಣೆ ನಡೆಸಲು ಸಜ್ಜಾಗಿದೆ, ಸಾರ್ವಜನಿಕರು ಕೂಡಾ ಈ ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಬೇಕೆಂದರು. ಯಾವುದೇ ಸಂದೇಹ ಅಥವಾ ಮಾಹಿತಿ ಬೇಕಾದಲ್ಲಿ ಚುನಾವಣಾ ಅಧಿಕಾರಿ (9483856497) ಅಥವಾ ಸಹಾಯಕ ಚುನಾವಣಾ ಅಧಿಕಾರಿ (9972590770) ಉಎಔಖ ಸಂಪರ್ಕಿಸುವಂತೆ ಕೋರಿದ್ದಾರೆ.

ಮೂಡುಬಿದಿರೆ ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು, ಪೆÇಲೀಸ್ ನಿರೀಕ್ಷಕ ನಿರಂಜನ್, ಉಪ ತಹಶಿಲ್ದಾರರಾದ ಬಾಲಚಂದ್ರ, ತಿಲಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.