ಮಾಪ್ಸ್ ಕಾಲೇಜಿನಲ್ಲಿ ಸಿ.ಎ ಪೌಂಡೇಶನ್ ಕೋರ್ಸಿನ ಬಗ್ಗೆ ಓರಿಯೆಂಟೇಶನ್ ಕಾರ್ಯಕ್ರಮ

ಮಾಪ್ಸ್ ಕಾಲೇಜು, ಮಂಗಳೂರು ಇಲ್ಲಿ ಜೂನ್ ತಿಂಗಳಲ್ಲಿ ನಡೆಯುವ ಸಿ.ಎ ಪೌಂಡೇಶನ್ ಪರೀಕ್ಷೆಯ ಬಗ್ಗೆ ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ ಓರಿಯೆಂಟೇಶನ್ ಕೋರ್ಸನ್ನು ನಡೆಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ದಿನೇಶ್ ಕುಮಾರ್ ಆಳ್ವ ಇವರು ಮಾತಾನಾಡುತ್ತಾ ಮಾಪ್ಸ್ ಕಾಲೇಜು ಸಿ.ಎ ಕೋಚಿಂಗ್‍ಗೆ ಹೆಸರಾದ ಸಂಸ್ಥೆಯಾಗಿದ್ದು ಅತ್ಯಂತ ಪರಿಣ ತಿ ಹೊಂದಿರುವ ಪ್ರಾಚಾರ್ಯರು ಕೋಚಿಂಗ್ ಒದಗಿಸುತ್ತಿದ್ದು, ಹಾಜಾರಾದ ವಿದ್ಯಾರ್ಥಿಗಳು ಉತ್ತಮ ಶ್ರೇಣ ಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶ್ರುತಿ ಶೆಟ್ಟಿಯವರು ಪೌಂಡೇಶನ್ ಕೋಚಿಂಗ್‍ನ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜಾರಾಗಲು ಅತ್ಯಂತ ಮುತುವರ್ಜಿಯಿಂದ ಸಿದ್ಧತೆ ಮಾಡಬೇಕೆಂದು ಕರೆಯಿತ್ತರು. ತದನಂತರ ಕೋಚಿಂಗ್ ಉಪನ್ಯಾಸಕರಾದ ಶ್ರೀ ಸಂಜೀವ ನಾರಾಯಣ ಇವರು ಸಿ.ಎ ಪೌಂಡೇಶನ್ ಪರೀಕ್ಷೆ ತಯಾರಿ ಬಗ್ಗೆ ಹಾಗೂ ವಿದ್ಯಾರ್ಥಿಗಳು ಮುಂದಕ್ಕೆ ಹೇಗೆ ಅದ್ಯಯನ ಮಾಡಬೇಕೆಂದು ಮಾಹಿತಿ ನೀಡಿದರು. ಸಿ.ಎ ಕೋರ್ಸಿನ ಸಂಯೋಜಕರಾದ ಶ್ರೀಮತಿ ಉಷಾ ಕಿರಣ್ ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಅಲಿಸನ್ ಸ್ವಾಗತಿಸಿದರು. ಶ್ರೀಮತಿ ಶ್ವೇತಾ ಕೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.