ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಚುನಾವಣೆಯಲ್ಲಿಸ್ಪರ್ಧೆ ಮಾಡ್ತೇನೆ : ಪ್ರಮೋದ್ ಮುತಾಲಿಕ್
ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ದೇಶದಲ್ಲಿ ಪ್ರಧಾನಿನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಹಿಂದುತ್ವದ ರಕ್ಷಣೆ ಮಾಡುತ್ತಿದ್ದಾರೆ. ಬೇರೆ ಯಾರಿಗೂ ಹಿಂದುತ್ವದ ಕಾಳಜಿ ಇಲ್ಲ ಎಂದರು
ಹಸುಗಳನ್ನು ರಕ್ಷಿಸಿದವರ ಮೇಲೆ, ಹಿಂದೂ ಯುವತಿಯರನ್ನು ರಕ್ಷಣೆ ಮಾಡಿದವರ ಮೇಲೆ ರೌಡಿ ಶೀಟರ್ ಓಪನ್ ಮಾಡಿದ್ದಾರೆ. ಬಿಜೆಪಿ ಸರ್ಕಾರ ಆ ಕೇಸ್ಗಳನ್ನು ವಾಪಸ್ ಪಡೆದುಕೊಂಡಿಲ್ಲ ಎಂದರು. ಮಂಗಳೂರು ಬಾಂಬ್ ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಬಾಂಬ್ ಸ್ಪೋಟದ ಆರೋಪಿಗಳಿಗೆ ಬೇರೆ ಬೇರೆ ರಾಜ್ಯಗಳಿಗೂ ಲಿಂಕ್ ಇರೋದು ಗೊತ್ತಾಗಿದೆ.
ಪ್ರತಿ ಸಲ ಘಟನೆ ಆದ ನಂತರ ಜಾಗೃತರಾಗುತ್ತಾರೆ, ಹೇಳಿಕೆ ನೀಡ್ತಾರೆ. ಇಸ್ಲಾಮಿಕ್, ಭಯೋತ್ಪಾದನೆ ಕೆಲಸಗಳು ನಡೆಯುತ್ತಿವೆ. ಶಾರೀಕ್ ಅನ್ನೋನು ಹಿಂದೆ ಕೇಸ್ ನಲ್ಲಿ ಇದ್ದು ಜಾಮೀನಿನ ಮೇಲೆ ಬರ್ತಾನೆ. ಸರ್ಕಾರ ಕೇವಲ ಅಧಿಕಾರ, ಚುನಾವಣೆ ಅಂದುಕೊಂಡ್ರೆ ಆಗೊಲ್ಲ. ವಿರೋಧ ಪಕ್ಷದಲ್ಲೂ ಭಯೋತ್ಪಾದಕರು ಇದ್ದಾರೆ ಎಂದು ಹರಿಹಾಯ್ದರು.
ನನ್ನ ಸ್ಪರ್ಧೆ ಬಗ್ಗೆ ಐದಾರು ಕ್ಷೇತ್ರದಲ್ಲಿ ಸರ್ವೆ ಮಾಡ್ತಾ ಇದ್ದೇನೆ. ಡಿಸೆಂಬರ್ ಎರಡನೇ ವಾರದಲ್ಲಿ ಯಾವ ಕ್ಷೇತ್ರ ಎಂದು ಫೈನಲ್ ಮಾಡ್ತೇನೆ. ಮುಂಬರುವ ಚುನಾವಣೆಗೆ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ. ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಸ್ಪರ್ಧೆ ಮಾಡ್ತೇನೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.