ಪಡುಬಿದ್ರಿಯಲ್ಲಿ ಸರಣಿ ಕಳ್ಳತನ, ಕಳವು ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಳೆದ ರಾತ್ರಿ ಪಡುಬಿದ್ರಿ ಮುಖ್ಯ ಮಾರುಕಟ್ಟೆಯ ಸೂಪರ್ ಮಾರ್ಕೆಟ್ ಹಾಗೂ ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯಲ್ಲಿ ಕಳ್ಳತನ ನಡೆದಿದ್ದು ಸಹಸ್ರಾರು ರೂಪಾಯಿ ಬೆಲೆಬಾಳುವ ವಸ್ತುಗಳು ಹಾಗೂ ನಗದು ಕಳವಾಗಿದ್ದು ಕಳ್ಳ ಸಿಸಿ ಕ್ಯಾಮಾರದಲ್ಲಿ ಸೆರೆ ಸಿಕ್ಕಿದ್ದಾನೆ.
ಮುಖ್ಯ ಮಾರುಕಟ್ಟೆಯಲ್ಲಿರುವ ಕೆ.ಎಸ್. ಬಜಾರ್‍ನ ಬೀಗ ಮುರಿದ ಕಳ್ಳ ಒಳ ಹೊಕ್ಕು ಒಂದು ಲ್ಯಾಪ್‍ಟಾಪ್ ಹಾಗೂ ಒಂದು ಬೊಬೈಲ್ ಕಳವು ನಡೆಸಿದ್ದಾನೆ.

ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯ ಬೀಗ ಮುರಿದು ಒಳ ಹೊಕ್ಕ ಕಳ್ಳ ಮಸೀದಿ ಹೆಸರಲ್ಲಿದ್ದ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು ಎರಡು ಸಾವಿರ ರೂಪಾಯಿ ನಗದು ಹಾಗೂ ಸುಮಾರು ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ಪ್ಯಾಂಟ್ ಶರ್ಟ್ ತನ್ನದೇ ಅಳತೆ ನೋಡಿ ಕಳವು ಮಾಡಿರುವುದು ಸಿಸಿಯಲ್ಲಿ ಸೆರೆಯಾಗಿದೆ. ರೈನ್ ಕೋಟ್, ಮಾಸ್ಕ್ ಧರಿಸಿ ಈ ಕಳ್ಳತನ ನಡೆಸಿದ್ದು ಎರಡು ಕಡೆ ಕೂಡಾ ಒರ್ವನೇ ತನ್ನ ಕೈಚಳಕ ತೋರಿಸಿದ್ದಾನೆ. ರಾತ್ರಿ ಹನ್ನೆರಡು ಮೂವತ್ತರ ಸುಮಾರಿಗೆ ಸೂಪರ್ ಬಜಾರ್ ಗೆ ಕನ್ನ ಹಾಕಿದರೆ, ಬಳಿಕ ಒಂದು ಹದಿನೈದರ ಸುಮಾರಿಗೆ ಬಟ್ಟೆಯಂಗಡಿಗೆ ದಾಳಿ ಮಾಡಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Related Posts

Leave a Reply

Your email address will not be published.