ರಸ್ತೆಯುದ್ಧಕ್ಕೂ ಚೆಲ್ಲುತ್ತಿರುವ ಮೀನಿನ ದುರ್ವಾಸನೆಯುಕ್ತ ನೀರು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಮಂಜೇಶ್ವರ : ಮೀನುಗಳನ್ನು ಬಾಕ್ಸ್ ಗಳಲ್ಲಿ ತುಂಬಿಕೊಂಡು ಹೆದ್ದಾರಿಯಲ್ಲಿ ಬೇರೆಡೆಗೆ ಸಾಗುವ ಮೀನು ಲಾರಿಗಳು ದುರ್ವಾಸನೆಯನ್ನು ಬೀರಿ ಅವಾಂತರ ಸೃಷ್ಟಿಸಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ವ್ಯಕ್ತವಾಗುತ್ತಿದೆ.

ಮೀನು ಸಾಗಾಟ ಮಾಡುವ ಲಾರಿಗಳು ಐಸ್ ತುಂಬಿದ ಬಾಕ್ಸ್ ಗಳಲ್ಲಿ ಮೀನುಗಳನ್ನು ಹಾಕಿಕೊಂಡು ಕಾಸರಗೋಡು ಭಾಗದಿಂದ ಕೇರಳದ ವಿವಿಧಡೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುತ್ತಿದೆ. ಆದರೆ ಲಾರಿಗಳಲ್ಲಿ ಐಸ್ ಕರಗಿದ ನೀರು ರಸ್ತೆಯ ಮೇಲೆ ಬೀಳದಂತೆ ಸೇಪ್ಟಿ ಟ್ಯಾಂಕ್ ಅಳವಡಿಸಿಕೊಂಡಿರಬೇಕು. ಅದು ತುಂಬಿದ ಬಳಿಕ ಜನವಸತಿ – ನಗರ ಪಟ್ಟಣ ಪ್ರದೇಶಗಳನ್ನು ಬಿಟ್ಟು ಬೇರೆಡೆಗೆ ಚೆಲ್ಲಿ ಮುಂದಕ್ಕೆ ಸಾಗಬೇಕೆಂಬ ನಿಯಮವಿದ್ದರೂ ಈ ನಿಯಮಗಳನ್ನೆಲ್ಲಾ ಗಾಳಿಗೆ ತೂರಿಕೊಂಡು ಮೀನಿನ ಲಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಪಾದಾಚಾರಿಗಳ ಮೇಲೆ ಸಿಂಪಡಿಸುತ್ತ ಸಾಗುತ್ತದೆ. ಇದರಿಂದ ಎಲ್ಲರಲ್ಲೂ ಮೀನಿನ ವಾಸನೆ ರಾಚುವಂತಾಗಿದೆ. ಇದರೊಂದಿಗೆ ಲಾರಿಯ ಆಯಿಲ್ ಸಹ ಮಿಶ್ರಣಗೊಂಡು ರಸ್ತೆಯ ಮೇಲೆ ಬೀಳುವುದರಿಂದ ಜಾರುವಂತಾಗಿ ಅಪಘಾತಗಳಿಗೂ ಕಾರಣವಾಗುತ್ತಿದೆ.

Related Posts

Leave a Reply

Your email address will not be published.