ಪಡುಬಿದ್ರಿ: ಸುಪ್ರ ಮಿನರಲ್ ವಾಟರ್ ಘಟಕ ಶುಭಾರಂಭ

ಪಡುಬಿದ್ರಿಯ ಹೆಜಮಾಡಿ ಬೇಬಿ ಐಸ್ ಪ್ಲ್ಯಾಂಟ್ ಸಮೀಪದಲ್ಲಿ ಸುಪ್ರ ಮಿನರಲ್ ವಾಟರ್ ಘಟಕ ಶುಭಾರಂಭಗೊಂಡಿತು.

ನೂತನ ಘಟಕವನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ದೀಪ ಬೆಳಗಿಸಿ ಚಾಲನೆಯನ್ನು ನೀಡಿದರು. ಇದೇ ವೇಳೆ ಮಾತನಾಡಿದ ಅವರು, ನೀರಿನ ವಿಚಾರದಲ್ಲಿ ಉಡುಪಿ ಜಿಲ್ಲೆಯ ಜನತೆ ಅತ್ಯಂತ ಭಾಗ್ಯಶಾಲಿಗಳು. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಶುದ್ಧ ನೀರು ಉತ್ಪಾದನಾ ಘಟಕ ಸುಪ್ರ ಉದ್ಘಾಟನೆಗೊಂಡಿರುವುದು ಹೆಮ್ಮೆಯ ವಿಚಾರ ಎಂದರು.

ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಮಾತನಾಡಿ, ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಜಾಸ್ತಿಯಾಗಿಯೇ ಇರುತ್ತದೆ. ಕರಾವಳಿ ಭಾಗದಲ್ಲಿ ನೀರಿನ ತೊಂದರೆಗಳು ಕಡಿಮೆ ಎಂದ ಅವರು, ಹೆಜಮಾಡಿಯಲ್ಲಿ ಸುಪ್ರ ಮಿನರಲ್ ಘಟಕ ಉದ್ಘಾಟನೆಗೊಂಡಿರುವುದು ಸಂತೋಷದ ವಿಚಾರ ಎಂದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಸೆಕ್ರೆಟರಿ ಶರಣ್ ಕುಮಾರ್ ಮಟ್ಟು ಅವರು ಮಾತನಾಡಿ, ನಮ್ಮ ಗ್ರಾಮೀಣ ಭಾಗದಲ್ಲಿ ಕಂಪೆನಿಗಳು ತಲೆ ಎತ್ತುತ್ತಿದೆ. ಇದೀಗ ನೀರಿನ ಘಟಕ ಬಂದಿದೆ. ಮುಂದೊಂದು ದಿನ ಸಮೃದ್ಧ ಗ್ರಾಮ ಹೆಜಮಾಡಿ ಆಗಲಿದೆ ಎಂದರು.

ಸುಪ್ರ ಮಿನರಲ್ ವಾಟರ್ ಘಟಕದ ಮಾಲಕರಾದ ಸತೀಶ್ ಕೋಟ್ಯಾನ್ ಅವರು ಮಾತನಾಡಿ, ಹೆಜಮಾಡಿಯಲ್ಲಿ ಸುಪ್ರ ಎನ್ನುವ ನೀರಿನ ಘಟಕ ಪ್ರಾರಂಭಿಸಿದ್ದೇವೆ. ಈ ಭಾಗದ ಜನತೆಗೆ ಕುಡಿಯುವ ನೀರು ಸಿಗಲಿ ಎಂಬ ಉದ್ದೇಶದಿಂದ ನೀರಿನ ಘಟಕವನ್ನು ಪ್ರಾರಂಭಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷರಾದ ರೇಷ್ಮಾ ಮೆಂಡನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ವಿಜಯ ಇಂಡಸ್ಟ್ರೀಸ್ ಕಟಪಾಡಿಯ ಪ್ರೊಪ್ರಾಯಿಟರ್ ಸತ್ಯೇಂದ್ರ ಪೈ, ಹೊಟೇಲಿಯರ್ ವಿಜಯ ಸುಂದರ್ ಶೆಟ್ಟಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷರಾದ ಮೋಹನ್‌ದಾಸ್ ಹೆಜಮಾಡಿ, ಸಾಧು ಸಾಲ್ಯಾನ್, ಬೇಬಿ ಕೋಟ್ಯಾನ್, ಶುಭದ, ವಿಜಯ್,  ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.