ಪಡುಪೆರಾರದಲ್ಲಿ ಶ್ರೀ ಶಾರದ ಜ್ಯೋತಿಷ್ಯಾಲಯದ ಶುಭಾರಂಭ
ಮಂಗಳೂರು: ಮಂಗಳೂರು ಮತ್ತು ಮುಂಬಯಿ ಮಹಾನಗರದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ತಮ್ಮನ್ನು ಗುರುತಿಸಿಕೊಂಡಿರುವ ಸಹೋದರರಾದ ಗುರುಶಂಕರ್ ಭಟ್ ಮತ್ರು ಶಂಕರ್‍ಗುರು ಭಟ್ ಅವರ ‘ಶ್ರೀ ಶಾರದ ಜ್ಯೋತಿಷ್ಯಾಲಯ’ದ ಉದ್ಘಾಟನಾ ಸಮಾರಂಭವು ಜರುಗಿತು.
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣರು ಗಣ್ಯರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕಜೆಪದವು ,ಪಡುಪೆರಾರದಲ್ಲಿ ಜರಗಿತು. ಪರಮ ಪೂಜ್ಯ ಪಲಿಮಾರು ಮಠ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳವರ ಮತ್ತು ಪರಮ ಪೂಜ್ಯ ಪೇಜಾವರ ಮಠ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳವರ ಶುಭ ಆಶೀರ್ವಾದಗಳೊಂದಿಗೆ ಉದ್ಘಾಟಿಸಲಾಯಿತು.
ಶ್ರೀ ಶಾರದ ಜ್ಯೋತಿಷ್ಯಾಲಯವನ್ನು ಕಜೆ ಪದವು ಬಸ್ ನಿಲ್ದಾಣ, ಶ್ರೀ ಅಯ್ಯಪ್ಪ ಮಂದಿರ ಹತ್ತಿರ, ಗುರುಪುರ, ಕೈಕಂಬ, ಬಜಪೆ ರೋಡ್, ಪೆರಾರದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣರು ಉದ್ಘಾಟಿಸಿ ಶುಭಕೋರಿದರು. ಹೆಚ್ಚಿನ ಮಾಹಿತಿ ಮೊ.ಸಂಖ್ಯೆ8123377424, 9987738824 ಸಂಪರ್ಕಿಸಬಹುದು.