ಆ.27,28 : ವರ್ಣಕುಟೀರ ಚಿತ್ರಕಲೆ ಹಾಗೂ ಕರಕುಶಲ ಕಲೆಯ ಪ್ರದರ್ಶನ

ಶ್ರೀಗಣೇಶೋತ್ಸವದ ಪ್ರಯುಕ್ತ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯು ನಡೆಸುವ ಚಿತ್ರಕಲೆ ಹಾಗೂ ಕರಕುಶಲ ಕಲೆಯ ಪ್ರದರ್ಶನ ಹಮ್ಮಿಕೊಂಡಿದೆ. ಆಗಸ್ಟ್ 27 ಮತ್ತು 28 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯ ತನಕ ಕಾವೆರಿ ಕಾಂಪ್ಲೆಕ್ಸ್,ಕಲ್ಲಾರೆ, ಮುಖ್ಯರಸ್ತೆ, ಪುತ್ತೂರು, ಇದರಲ್ಲಿ ಗಣೇಶನ ನಾನಾ ರೀತಿ ಯ ಕರಕುಶಲ ಕಲೆ, ಕ್ಲೇ ಮೊಡೆಲಿಂಗ್ ಚಿತ್ರಕಲೆಗಳು ಇವೆ. ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಚಿತ್ರಕಲೆ ಹಾಗೂ ಕ್ಲೇ ಮೊಡೆಲಿಂಗ್ ಪ್ರದರ್ಶನವಾಗಲಿದೆ. ಎಂದು ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆ ಯ ಸಂಚಾಲಕರದ ಪ್ರವೀಣ್ ವರ್ಣ ಕುಟೀರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರದರ್ಶನದಲ್ಲಿ ಸುಮಾರು 800 ಹೆಚ್ಚು ಕಲಾಕೃತಿಗಳನ್ನು ಒಳಗೊಂಡಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಕಲಾ ಪ್ರದರ್ಶನ ನೀಡಲಿದ್ದಾರೆ. ಈ ಸಂಸ್ಥೆಯು 19 ವರ್ಷಗಳಿಂದ ಮಕ್ಕಳಗೆ ಕಲಾ ಶಿಕ್ಷಣವನ್ನು ನೀಡುತ್ತಿದ್ದು, ಇಲ್ಲಿ ಚಿತ್ರಕಲೆ, ಕ್ಲೇ ಮೊಡೆಲಿಂಗ್, ಸುಗಮ ಸಂಗೀತ ಕೀಬೋರ್ಡು ತರಬೇತಿ ನೀಡುತ್ತಾ ಬಂದಿದೆ.ಹಾಗೂ ಪ್ಲೇ ಸ್ಕೂಲ್ ನ್ನು ಕೂಡಾ ಆರಂಭಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಸುನಿತಾ ಪ್ರವೀಣ್, ಅಧ್ಯಕ್ಷರು ವರ್ಣಕುಟೀರ ಕಲಾಶಿಕ್ಷಣ ಸಂಸ್ಥೆ ಶ್ರೀ ಬಾಲಸುಬ್ರಹ್ಮಣ್ಯ ಶರ್ಮ,ಪೆÇೀಷಕರು. ಶ್ರೀಮತಿ ಗೀತಾ ಭಟ್ ಪೆÇೀಷಕರು, ಶ್ರೀಮತಿ ಪೂರ್ಣಿಮಾ ಭಟ್, ರವೀಂದ್ರ ಪೈ ಮಾಲಕರು, ಪೈ ಸರ್ಜಿಕಲ್ಸ್.ಉಪಸ್ಥಿತರಿದ್ದರು.

Related Posts

Leave a Reply

Your email address will not be published.