ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

ಕಾರ್ಕಳ: ಕಾಂಗ್ರೆಸ್‍ನ ಕುಟಿಲ ರಾಜಕೀಯದ ಪರಮಾವಧಿಯೆ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳೆ ಹಿಂದೂ ಶಬ್ದದ ಅವಹೇಳನಕಾರಿ ಹೇಳಿಕೆ. ಕಾಂಗ್ರೆಸ್‍ನ ಹೀನ ರಾಜಕಾರಣದ ಬಗ್ಗೆ ಪ್ರತಿ ಹಿಂದೂವಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು ಹಿಂದುತ್ವ ಪ್ರತಿ ಹಿಂದೂ ಜೀವ ತ್ಯಾಗಕ್ಕೂ ಸಿದ್ಧರಿರಬೇಕಿದೆ ಎಂದು ಗೆರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಮನಿರಾಜ ಶೆಟ್ಟಿ ಹೇಳಿದರು. ಬಿಜೆಪಿ ಕಾರ್ಕಳ ಇದರ ವತಿಯಿಂದ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ವಿರುದ್ಧ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಮಾತನಾಡಿ ಕಳೆದ 60 ವರ್ಷಗಳಿಂದಲೂ ಕಾಂಗ್ರೆಸ್ ಹಿಂದು ವಿರೋಧಿ ಕೃತ್ಯವನ್ನು ಮುಂದುವರಿಸಿಕೊಂಡು ಬಂದಿದೆ ಜಾತಿ ಆಧಾರದಲ್ಲಿ ವಿಭಜನೆ ನಡೆಸಿದರೆ ಕಾಂಗ್ರೆಸ್ ಅವನತಿ ಹೊಂದಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಮಡಿವಾಳ್ ಮಾತನಾಡಿದರು ಪ್ರಮುಖರಾದ ಜಯರಾಮ್ ಸಾಲಿಯಾನ್ ಪುರಸಭೆ ಅಧ್ಯಕ್ಷ ಸುಮಕೇಶವ್ ರೇಷ್ಮಾ ಉದಯ ಶೆಟ್ಟಿ, ಮಾಧ್ಯಮ ವಕ್ತಾರ ಹರೀಶಣೆ, ವಿನಯ ಡಿ ಬಂಗೇರ ಪುರಸಭಾ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.