ಉಜಿರೆ ಎಸ್.ಡಿ.ಎಂ.ಗೆ ಬೆಸ್ಟ್ ಜರ್ನಲಿಸಂ ಡಿಪಾರ್ಟ್‍ಮೆಂಟ್
ಅವಾರ್ಡ್

ಉಜಿರೆ, : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಬೆಂಗಳೂರಿನ ದಿ ನ್ಯೂ ಇಂಡಿಯನ್ ಟೈಮ್ಸ್ಸಂ ಸ್ಥೆಯು ಕರ್ನಾಟಕದ ಅತ್ಯುತ್ತಮ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಎಂದು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾರ್ಚ್ 6ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವರ್ಣರಂಜಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಜಿರೆಯ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ವಿಭಾಗದ ವಿದ್ಯಾರ್ಥಿಗಳೂ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಉಜಿರೆಯ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ‘ನಮ್ಮೂರ ವಾರ್ತೆ’ ಸುದ್ದಿ ಸಂಚಿಕೆ ಹಾಗೂ ವಿಭಾಗದ ಪ್ರಾಯೋಗಿಕ ತರಬೇತಿಯ ವಿವಿಧ ಆಯಾಮಗಳು, ವಿಭಾಗದ ಒಟ್ಟು ಸಾಧನೆ, ಪ್ರವೇಶಾತಿ ಪ್ರಮಾಣ ಮತ್ತು ನೇಮಕಾತಿ ಸಾಧನೆಯ ವಿವರಗಳನ್ನು ಪರಿಗಣಿಸಿ ಈ ಮಾನ್ಯತೆಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿಭಾಗದ ಎಲ್ಲಾ ಪ್ರಾಯೋಗಿಕ ಚಟುವಟಿಕೆಗಳನ್ನು ಯೂ ಟ್ಯೂಬ್ ಮೂಲಕವೂ ನಿರಂತರವಾಗಿ ಪ್ರಸಾರ ಮಾಡುವ ಮೂಲಕ ಮಾಧ್ಯಮ ಶಿಕ್ಷಣ ರಂಗದಲ್ಲಿ ವಿಭಾಗವು ವಿಶೇಷ ಸಾಧನೆಗೈದಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಗುರುತಿಸಲಾಗಿದೆ. ದಿ ನ್ಯೂ ಇಂಡಿಯನ್ ಟೈಮ್ಸ್ ರಾಜ್ಯದ ಪ್ರಸಿದ್ಧ ನ್ಯೂಸ್ಪೋ ರ್ಟಲ್ ಆಗಿ ಕಾರ್ಯೋನ್ಮುಖವಾಗಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣ ನೀಡುತ್ತಿರುವ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಯ ಕುರಿತು ಸಮೀಕ್ಷೆ ನಡೆಸಲಾಗಿತ್ತು. ರಾಜ್ಯದ ಪ್ರಮುಖ ನ್ಯೂಸ್ ಚಾನಲ್‍ಗಳ ಅತ್ಯುತ್ತಮ ಆ್ಯಂಕರ್‍ಗಳು, ವಾಯ್ಸ್ ಓವರ್ ಆರ್ಟಿಸ್ಟ್, ಉತ್ತಮ ವರದಿಗಾರರು, ಉತ್ತಮ ಅಪರಾಧ ವರದಿಗಾರರು, ವೀಡಿಯೋ ಎಡಿಟಿಂಗ್ ಸೇರಿದಂತೆ ಮಹತ್ವದ ವಿಭಾಗಗಳಲ್ಲಅತ್ಯುತ್ತಮ ಸಾಧನೆಗೈದವರನ್ನು ಗುರುತಿಸಿ ಟಿಎನ್‍ಐಟಿ ಸಂಸ್ಥೆಯು ಕಳೆದ ಆರುವರ್ಷಗಳಿಂದ ಪ್ರತಿವರ್ಷ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಪ್ರಸಕ್ತ ವರ್ಷ ಈ ಪ್ರಶಸ್ತಿಗಳೊಂದಿಗೆ ರಾಜ್ಯದ ಅತ್ಯುತ್ತಮ ಪತ್ರಿಕೋದ್ಯಮ ಕಾಲೇಜನ್ನು ಗುರುತಿಸುವ ಸಂಪ್ರದಾಯವನ್ನು ಆರಂಭಿಸಿದೆ.