ಉಜಿರೆಯಲ್ಲಿ ಮತದಾರರ ನೋಂದಣಿ ಅಭಿಯಾನ

ಮತದಾನವೆಂಬುದು ಪ್ರತಿಯೊಬ್ಬ ಭಾರತೀಯ ಪ್ರಜೆಯ  ಹಕ್ಕಾದರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಚುನಾವಣಾ ತರಬೇತುದಾರ, ಕನ್ನಡ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸಹಶಿಕ್ಷಕ ಧರಣೇಂದ್ರ ಕೆ.   ಹೇಳಿದರು.

     ಉಜಿರೆ ಶ್ರೀ ಧ. ಮಂ ಕಾಲೇಜು ಇಲ್ಲಿ ವಿದ್ಯಾರ್ಥಿ ಕ್ಷೇಮಪಾಲನೆ ಹಾಗೂ ಶಿಸ್ತಿನ ಸಮಿತಿ ಆಶ್ರಯದಲ್ಲಿ  ದ.ಕ ಜಿಲ್ಲಾ ಕಂದಾಯ ಇಲಾಖೆಯು ಆಯೋಜಿಸಿದ್ದ  ‘ಮತದಾರರ ನೋಂದಣಿ ಅಭಿಯಾನ’ದ  ಪ್ರಾರಂಭದಲ್ಲಿ ನಡೆದ  ಮಾಹಿತಿ ಕಾರ್ಯಕ್ರಮದಲ್ಲಿ   ಅವರು ಮಾತನಾಡುತ್ತಿದ್ದರು.

      ಬೆರಳ ತುದಿಯಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು ಸಾಧ್ಯವಿದ್ದು ವರ್ಷಕ್ಕೆ ನಾಲ್ಕು ಬಾರಿ ನೋಂದಣಿ ಕಾರ್ಯ ನಡೆಯುತ್ತದೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಸ್ವೀಪ್ ಕಾರ್ಯಕ್ರಮದಡಿ  ಜನವರಿ 01ಕ್ಕೆ  18ವರ್ಷ ತುಂಬಿದ ಭಾರತೀಯ ಪ್ರಜೆಗಳೆಲ್ಲರೂ ಮತದಾನದ ಗುರುತಿನ ಚೀಟಿ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಮತದಾರರಾಗಬೇಕೆಂದು ಅವರು ಕರೆ ನೀಡಿದರು.

     ಮತದಾನದ ವರ್ಷವಾದ 2023ರ ಹೊತ್ತಿಗೆ ನಮೂನೆ 6 ಮತ್ತು 7ರನ್ವಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ತೆಗೆದು ಹಾಕುವ ಅಗತ್ಯತೆಗಳ ಬಗೆಗವರು ಜಾಗೃತಿ ಮೂಡಿಸಿದರು.

sdm ujire

‌‌ಈ ಸಂದರ್ಭ ವೋಟರ್ ಹೆಲ್ಪ್ ಲೈನ್ ನ ಮೂಲಕ ಮತದಾರ ನೋಂದಣಿ ಮಾಡುವ  ಕುರಿತು  ಮಾಹಿತಿ ನೀಡಲಾಯಿತು. ಹಾಗೂ ಮುಂದಿನ ಮೂರು ದಿನಗಳ ಕಾಲ ಕಾಲೇಜಿನಲ್ಲಿ ಅಭಿಯಾನ ನಡೆಯಲಿದ್ದು ಈ ಕಾರ್ಯಕ್ರಮವೂ  ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತದಾರರ ಗುರುತಿನ ಚೀಟಿ  ಹೊಂದಿರುವ ಉದ್ದೇಶ ಹೊಂದಿದೆ.

    ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ, ವಿದ್ಯಾರ್ಥಿ ಕ್ಷೇಮಪಾಲನೆ ಹಾಗೂ ಶಿಸ್ತಿನ ಸಮಿತಿಯ ಸಂಯೋಜಕ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್.  ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ  ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮತದಾರ ನೋಂದಣಿ ಅಭಿಯಾನದ ನೋಡಲ್ ಅಧಿಕಾರಿ ನಟರಾಜ್ ಹೆಚ್. ಕೆ ಕಾರ್ಯಕ್ರಮ  ನಿರ್ವಹಿಸಿದರು

Related Posts

Leave a Reply

Your email address will not be published.