ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ನಡೆದ ಚರ್ಚಾ ಸ್ಪರ್ಧೆ : ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಪ್ರಥಮ

ಅ. 17ರಂದು ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ನಡೆದ ಪೂಜ್ಯ ಶ್ರೀ. ರತ್ನವರ್ಮ ಹೆಗ್ಗಡೆ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯ ಪರ – ವಿರೋಧ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಪ್ರಥಮ ಸ್ಥಾನಪಡೆದುಕೊಂಡಿದೆ. ದ್ವೀತಿಯ ಸ್ಥಾನವನ್ನು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜು ಗಳಿಸಿಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ಸೆಂಟ್ಫಿಲೋಮಿನಾ ಕಾಲೇಜಿನ ಶ್ರೀದೇವಿ ಕೆ ಪಡೆದುಕೊಂಡರು.ಸ್ಪರ್ಧೆಯು ಆಕರ್ಷಕ ಬಹುಮಾನವನ್ನು ಒಳಗೊಂಡಿದ್ದು, ಪ್ರಥಮ ಬಹುಮಾನವು ಟ್ರೋಫಿ, ಹತ್ತು ಸಾವಿರ ನಗದು ಹಾಗೂ
ಫಲಕವನ್ನು ಒಳಗೊಂಡಿದೆ. ದ್ವಿತೀಯ ಬಹುಮಾನ ಎಂಟು ಸಾವಿರ ನಗದು ಹಾಗೂ ಟ್ರೋಫಿಯನ್ನು ಒಳಗೊಂಡಿದೆ. ವೈಯಕ್ತಿಕಬಹುಮಾನವು ಐದು ಸಾವಿರ ನಗದು ಪ್ರಶಸ್ತಿ ಪತ್ರ ಒಳಗೊಂಡಿದೆ. ಸ್ವರ್ಧೆಯಲ್ಲಿ ಒಟ್ಟು 16 ಕಾಲೇಜು ಆಗಮಿಸಿ, ಸಾಮಾಜಿಕಜಾಲತಾಣಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆಯೇ? ಎಂಬ ವಿಷಯದ ಮೇಲೆ ಚರ್ಚೆ ಮಂಡಿಸಿದರು.ತೀರ್ಪುಗಾರರಾಗಿ ಗುರುದೇವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ವಾಣಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್
ಆಗಮಿಸಿ ಕಾರ್ಯಕ್ರಮದ ಕುರಿತು ಅನಿಸಿಕೆ ಹಂಚಿಕೊಂಡರು.

Related Posts

Leave a Reply

Your email address will not be published.