ಮುದ್ರಣಕ್ಷೇತ್ರವು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ – ಶೇಖರ್ ಟಿ

“ಮುದ್ರಣ ಕ್ಷೇತ್ರದಲ್ಲಿನ ಕಾರ್ಯ ಎರಡು ಮೂರು ದಿನಕ್ಕೆ ಸೀಮಿತವಾದದ್ದಲ್ಲ ನಿರಂತರ ಕೆಲಸವನ್ನು ಒಳಗೊಂಡಿದ್ದು ಜನರ ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗುತ್ತದೆ “ಎಂದು ಉಜಿರೆಯ ಮಂಜುಶ್ರೀ ಪ್ರಿಂಟಿಂಗ್ ಪ್ರೆಸ್ ನ ವ್ಯವಸ್ಥಾಪಕ ಶೇಖರ್ ಟಿ ಹೇಳಿದರು.

      ಉಜಿರೆ ಶ್ರೀ ಧ ಮಂ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ “ಮುದ್ರಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು” ಎಂಬ ವಿಷಯದ ಕುರಿತಾದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

     “ಮುದ್ರಣ ಕ್ಷೇತ್ರದಲ್ಲಿ ವಿವಿಧ ಬಗೆಯ ಉದ್ಯೋಗಾವಕಾಶಗಳು ಇರುತ್ತವೆ. ಪುಸ್ತಕಗಳು, ಡೈರಿಗಳು, ಆಮಂತ್ರಣ ಪತ್ರಿಕೆ, ನಿಯತಕಾಲಿಕೆಗಳನ್ನೆಲ್ಲ ಮುದ್ರಿಸಲಾಗುತ್ತದೆ. ಮುಖ್ಯವಾಗಿ ಸಕಾಲದಲ್ಲಿ ಮುದ್ರಿಸಿ ಕೊಡುವುದು ಪ್ರಮುಖ ಕರ್ತವ್ಯವಾಗಿರುತ್ತದೆ” ಎಂದು ನುಡಿದರು.

     “ಪುಟ ವಿನ್ಯಾಸಕ್ಕೆ ಅತಿ ಹೆಚ್ಚು ಬೇಡಿಕೆಯಿದ್ದು, ಪ್ರಸ್ತುತ ದಿನದಲ್ಲಿ ಅದಕ್ಕೆ ಹೆಚ್ಚಿನ ಅವಕಾಶಗಳಿವೆ. ಪ್ರೂಫ್ ರೀಡಿಂಗ್, ಪ್ಲೇಟ್ ಮೇಕಿಂಗ್, ಡಿಜಿಟಲ್ ಪ್ರಿಂಟರ್ ನಂತಹ ವ್ಯವಸ್ಥೆಗಳಿರುವುದರಿಂದ ಯಶಸ್ವಿಯಾಗಿ ಮುದ್ರಣ ಯಂತ್ರ ಕಾರ್ಯನಿರ್ವಹಿಸುತ್ತದೆ” ಎಂದು ಮುದ್ರಣ ಕ್ಷೇತ್ರದ ವಿವಿಧ ಆಯಾಮಗಳ ಬಗ್ಗೆ ತಿಳಿಸಿಕೊಟ್ಟರು.

“ಸಮಯ ಪಾಲನೆ ಉದ್ಯೋಗದಲ್ಲಿ ಅತಿ ಮುಖ್ಯ ವಾಗಿರುತ್ತದೆ. ನಾವು ಮಾಡಿದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದಾಗ ಎಂತಹ ಕಷ್ಟವೂ ಮರೆತು ಹೋಗುತ್ತದೆ. ಹಾಗೆಯೇ ಮುದ್ರಣದ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಮಾಹಿತಿಗಳನ್ನೂ ಕೂಡ ತಿಳಿದುಕೊಳ್ಳಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಶೇಖರ್ ಹಳೆಮನೆ, ಮಹೇಶ್ ಉಪಸ್ಥಿತರಿದ್ದರು.ತೃತೀಯ ಬಿಎ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.