ಶಿವಪಾಡಿ ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಫೆಬ್ರವರಿ 18 ರಂದು : “ಅಬ್ಬಗ ದಾರಗ” ತುಳು ಪ್ರಸಂಗ ಮತ್ತು “ಬೇಡರ ಕಣ್ಣಪ್ಪ” ಕನ್ನಡ ಪ್ರಸಂಗ ಯಕ್ಷಗಾನ ಪ್ರದರ್ಶನ

ಶಿವಪಾಡಿ ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಫೆಬ್ರವರಿ 18 ರಂದು ಆಚರಿಸಲ್ಪಡುವ ಮಹಾಶಿವರಾತ್ರಿಯ ಅಂಗವಾಗಿ ‘ಮಹಾಶಿವರಾತ್ರಿ ಮಹೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 06:30 ರಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಸರ್ವ ಸೇವೆಗಳು ನೆರವೇರಲಿವೆ. ರಾತ್ರಿ 10:30 ರಿಂದ ಸಹಸ್ರ ಬಿಲ್ವಾರ್ಚನೆ, ಮಹಾರಂಗಾ ಪೂಜಾದಿಗಳು ಜರುಗಲಿದ್ದು, ರಾತ್ರಿ 09:30 ರಿಂದ ಪ್ರಾತಃಕಾಲದವರೆಗೆ ದೇವಸ್ಥಾನದ ವಠಾರದಲ್ಲಿ ಶ್ರೀ ಮಯೂರ ವಾಹನ ಯಕ್ಷಗಾನ ನಾಟಕ ಸಭಾ ಸೂಡ ಇವರಿಂದ “ಅಬ್ಬಗ ದಾರಗ” ತುಳು ಪ್ರಸಂಗ ಮತ್ತು “ಬೇಡರ ಕಣ್ಣಪ್ಪ” ಕನ್ನಡ ಪ್ರಸಂಗ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಅತಿರುದ್ರ ಮಹಾಯಾಗ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ದೇಗುಲದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ತಿಳಿಸಿದ್ದಾರೆ.