ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವೃತ್ತಿ ಕೌಶಲ್ಯ ಶಿಕ್ಷಣ ಮಾಹಿತಿ ಕಾರ್ಯಕ್ರಮ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಕರಿಯರ್ ಗೈಡೆನ್ಸ್ ಸೆಲ್ ಮತ್ತು ಐಕ್ಯುಎಸಿ ವತಿಯಿಂದ ವಿಜ್ಞಾನ ಸಂಘ ಮತ್ತು ನೇಚರ್ ಕ್ಲಬ್ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ಶಿಕ್ಷಣ ಮಾಹಿತಿ ಕಾರ್ಯಕ್ರಮವು ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಟಾಟಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಇಲ್ಲಿನ ಮ್ಯಾನೇಜರ್ ಪೂರ್ಣಚಂದ್ರ ಬಿ ಪಿ ಯವರು ಮಾತನಾಡಿ ಟಾಟಾ ಎಜುಕೇಶನ್ ಟ್ರಸ್ಟ್ ನ ಮೂಲಕ ಸ್ಕಿಲ್ ಇಂಡಿಯಾ ಯೋಜನೆಯಂತೆ ವಿಜ್ಞಾನ ಪದವಿ ಮತ್ತು ಬಿಸಿಎ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುವ ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಇತರ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕಾಗಿ ಪ್ರೊಫೆಷನಲ್ ಕುಕ್ಕಿಂಗ್ ಸ್ಕಿಲ್ಸ್ ಎಂಬ ಎರಡು ತರಬೇತಿ ಶಿಕ್ಷಣದ ಬಗ್ಗೆ ವಿವರಿಸಿದರು. ಈ ಕೋರ್ಸ್ ಗಳಲ್ಲಿ ನೋಂದಾಯಿಸಿಕೊಳ್ಳಲು ಬೇಕಾದ ಪರೀಕ್ಷೆಗಳು, ಶುಲ್ಕ, ಸೌಲಭ್ಯಗಳು, ಉದ್ಯೋಗಾವಕಾಶ ಇತ್ಯಾದಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ. ಮಮತಾ ಕೆ ವಹಿಸಿದ್ದರು. ವೇದಿಕೆಯಲ್ಲಿ ಕಿರಿಯರ್ ಅಂಡ್ ಪ್ಲೇಸ್ಮೆಂಟ್ ಸಂಚಾಲಕಿ ಭವ್ಯ ಮನು ಪೆರುಮುಂಡ ಉಪಸ್ಥಿತರಿದ್ದರು. ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಸ್ವಾಗತಿಸಿ ವಂದಿಸಿದರು. ಅಂತಿಮ ವಿಜ್ಞಾನ ಪದವಿ ಮತ್ತು ಬಿಸಿಎ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪವನ್ ಸಹಕರಿಸಿದರು.
