Home Posts tagged #v4news karnataka (Page 83)

ಕುಂದಾ ಬಾರಂದಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿ ಸಾನಿಧ್ಯ : ಲೋಕಕಲ್ಯಾಣಾರ್ಥವಾಗಿ ಶತಚಂಡಿಕಾ ಯಾಗ

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರತಾಲೂಕಿನ ಕುಂದಬಾರಂದಾಡಿ ಗ್ರಾಮದ ಮೂಡಾರೆ ಶ್ರೀದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ಊರಿನ ಒಳಿತಿಗಾಗಿ ಹಮ್ಮಿಕೊಳ್ಳಲಾದ ವೇ.ಮೂ ರಾಮಕೃಷ್ಣ ಭಟ್ಟ್ ಶಾರ್ಕೆ ನೇತೃತ್ವದಲ್ಲಿ ಶತಚಂಡಿಕಾ ಯಾಗ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರ್ಣಾಹುತಿ ಆಗುವುದರ ಮುಖೇನ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ದೂರ ದೂರ ಊರಿನಿಂದ ಆಗಮಿಸಿದ

ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಬಂಧನ ಖಂಡನೀಯ : ಎಸ್‌ ಡಿಪಿಐ

ಮಂಗಳೂರು: ಅನಧಿಕೃತ ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಲು ಆಗ್ರಹಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಇಂದು ಸುರತ್ಕಲ್ ಟೋಲ್ ಬಳಿ ಪ್ರತಿಭಟನೆ ನಡೆಸುತ್ತುದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಎಸ್ ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಈ ದೇಶದ ಸಂವಿಧಾನವು ಅನ್ಯಾಯ, ಅನೀತಿ, ಅಕ್ರಮದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನೀಡಿದೆ ಆದರೆ ಬಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ : 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ

ಮಂಗಳೂರು ತಾಲೂಕಿನ ಅದ್ಯಪಾಡಿ ಬೈಲು ಮಾಗಣೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ ಇಲ್ಲಿ ನಡೆಯಲಿರುವ ಬ್ರಹ್ಮಲಕಶೋತ್ಸವ ಹಾಗೂ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಅಕ್ಟೋಬರ್ 17ರಿಂದ 2023 ಜನವರಿ 31ರ ವರೆಗೆ 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2023ರ ಫೆಬ್ರವರಿ 1ರಿಂದ ಸೂರ್ಯೋದಯದಿಂದ ಫೆಬ್ರವರಿ 2, 2023ರ ಸೂರ್ಯೋದಯದವರೆಗೆ ಏಕಹಾ ಭಜನಾ ಮಂಗಳೋತ್ಸವ ನಡೆಯಲಿದೆ. ನಿನ್ನೆಯಿಂದ

ಮಂಜೇಶ್ವರ : ರಾಗಂ ಜಂಕ್ಷನ್ ಮಧ್ಯ ಅಂಡರ್ ಪಾಸ್ ನಿರ್ಮಿಸಬೇಕೆಂಬ ಆಗ್ರಹ

ಮಂಜೇಶ್ವರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿರುವ ಮಂಜೇಶ್ವರ ಗೋವಿಂದ ಪೈ ಕಾಲೇಜು ಹಾಗೂ ರಾಗಂ ಜಂಕ್ಷನ್ ಮಧ್ಯ ಅಂಡರ್ ಪಾಸ್ ನಿರ್ಮಿಸಬೇಕೆಂಬ ಬೇಡಿಕೆಯೊಂದಿಗೆ ಊರ ನಾಗರೀಕರು ಸಮಿತಿ ರಚಿಸಿ ಸಂಬಂಧಪಟ್ಟವರಿಗೆ ಮನವಿ ನೀಡಲು ತೀರ್ಮಾನಿಸಿದ್ದಾರೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಿರುವ ಹಾಗೂ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಸೇರಿದಂತೆ ಇತರ ಹಲವು ಶಾಲೆಗಳನ್ನು ಕೂಡಾ ಸಂಪರ್ಕದ ರಸ್ತೆ ಇರುವ ಗೋವಿಂದ ಪೈ ಕಾಲೇಜು, ಮತ್ತೊಂದು ಭಾಗದಲ್ಲಿ

ಅಡಕೆ ಆಮದು ವಿಚಾರದಲ್ಲಿ ಸರ್ಕಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ

ಪುತ್ತೂರು:ನಮ್ಮ ದೇಶದಲ್ಲಿ ಸುಮಾರು 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದೇಶಕ್ಕೆ ಬೇಕಾಗುವಷ್ಟು ಅಡಕೆ ಬೆಳೆಯಲಾಗುತ್ತಿದ್ದರೂ ಇದೀಗ ಭೂತಾನ್‍ನಿಂದ ಅಡಕೆ ಆಮದು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದ ಅಡಕೆ ಬೆಳೆಗಾರರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಕೇಂದ್ರ ಸರಕಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,

ಹೆಜಮಾಡಿ : ಗುದ್ದಲಿ ಪೂಜೆ ನಡೆದು ಏಳು ತಿಂಗಳಾದರೂ ದುರಸ್ಥಿಯಾಗದ ರಸ್ತೆ

ಹೆಜಮಾಡಿ ಗುಂಡಿ ರಸ್ತೆ ದುರಸ್ತಿಗಾಗಿ ಕಳೆದ ಏಳು ತಿಂಗಳ ಹಿಂದೆ ಶಾಸಕರು ಗುದ್ದಲಿ ಪೂಜೆ ನಡೆಸಿದ್ದರಾದರೂ, ಈ ವರೆಗೂ ದುರಸ್ತಿ ಕಾಣದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥ ಯೋಗೀಶ್ ಶೆಣೈ ಮಾತನಾಡಿ, ನಮ್ಮ ಬಲು ಬೇಡಿಕೆಯ ಗುಂಡಿ ರಸ್ತೆ ದುರಸ್ತಿಗಾಗಿ ಅದೆಷ್ಟೋ ಮನವಿಗಳ ಬಳಿಕ ಕಳೆದ ಏಳು ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿದ್ದು, ಗುದ್ದಲಿ ಪೂಜೆ ನಡೆದು ಎರಡು ತಿಂಗಳ ಬಳಿಕ

ಮಹಡಿಯಿಂದ ಬಿದ್ದು ಯುವಕ ಮೃತ್ಯು

ಮಂಗಳೂರು: ಯುವಕನೋರ್ವ ಆಕಸ್ಮಿಕವಾಗಿ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ರಾತ್ರಿ ನಡೆದಿದೆ. ಕುದ್ರೋಳಿ ಸಮೀಪದ ಕಂಡತ್‌ ಪಳ್ಳಿ ಬಳಿಯ ಟಿ.ಕೆ.ಎಚ್. ಖಾದರ್ ಎಂಬವರ ಪುತ್ರ ಮುಹಮ್ಮದ್ ರಿಯಾಝ್ (33) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ರಿಯಾಝ್ ಮನೆಯ ಮಹಡಿ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ತಕ್ಷಣ  ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ

ಸಂಸದರಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು,ಅ.18(ಕ.ವಾ):- ಪಂಪ್ ವೆಲ್ ನಲ್ಲಿ ಕರ್ನಾಟಕ ಬ್ಯಾಂಕ್ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಅ.18ರಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಸ್ಮಾರ್ಟ್ ಸಿಟಿ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇತರೆ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜನಿಗೆ ಬೆದರಿಕೆ ಪ್ರಕರಣ ಸಿಐಡಿ ತನಿಖೆಗೆ

ಬಂಟ್ವಾಳ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿದೆ. ಪ್ರಕರಣದ ಕಡತಗಳನ್ನು ಬಂಟ್ವಾಳ ಪೊಲೀಸರು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ. ಗುರುವಾರ ರಾತ್ರಿ ಸುಮಾರು 11.15ಕ್ಕೆ ಕೆಲ ದುಷ್ಕರ್ಮಿಗಳು ಶಾಸಕ ಹರೀಶ್​ ಪೂಂಜಾರವರ ಕಾರನ್ನು ಅಡ್ಡಗಟ್ಟಿದ್ದರು. ಶಾಸಕರ ಕಾರು ಚಾಲಕನ ದೂರಿನಂತೆ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್

ಕಾಶೀ ಮಠಾಧೀಶರ ಸಂಭ್ರಮದ ದಿಗ್ವಿಜಯ ಮಹೋತ್ಸವ

ಮಂಗಳೂರು: ನಗರದ ವೆಂಕಟ್ರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವೃತದಲ್ಲಿರುವ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ ಕಾರ್ಯಕ್ರಮ ಶನಿವಾರ ವೈಭವದಿಂದ ನಡೆಯಿತು. ಈ ಅಪೂರ್ವ ಕ್ಷಣಕ್ಕೆ ದೇಶದ ನಾನಾ ಕಡೆಯಿಂದ ಆಗಮಿಸಿದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳು ಸಾಕ್ಷಿಯಾದರು. ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಚಾತುರ್ಮಾಸ್ಯ ಮೆರವಣಿಗೆ ಆರಂಭಗೊಂಡು ಮಹಾಮ್ಮಾಯ ದೇವಸ್ಥಾನ ರಸ್ತೆ, ಗದ್ದೆಕೇರಿ, ಮಂಜೇಶ್ವರ ಗೋವಿಂದ