Home Posts tagged #v4news karnataka (Page 82)

ಮಂಗಳೂರು : ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ

ವಿಶ್ವದ ಹಲವಾರು ದೇಶಗಳಲ್ಲಿ ಅಕ್ಟೋಬರ್ 25ರಂದು ಕಾಣಲಿರುವ ಸೂರ್ಯಗ್ರಹಣ, ಭಾರತದ ಭೂಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿ ಗೋಚರಿಸಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಸುಮಾರು ಘಂಟೆ ಸಂಜೆ 5:09 ರಿಂದ 6:06ರ ವರೆಗೆ ಕಾಣಸಿಗುವ ಈ ಘಟನೆಯಲ್ಲಿ ಸುಮಾರು ಘಂಟೆ ಸಂಜೆ 5:50ರ ಹೊತ್ತಿಗೆ ಅತಿಹೆಚ್ಚು ಅಂದರೆ ಸೂರ್ಯನ ಬಿಂಬದ 10.9% ಶೇಕಡದಷ್ಟು ಭಾಗವನ್ನು ಮರೆಮಾಚಲಿದೆ.

ಬಂಟ್ವಾಳ : ಕಣಜಗಳ ಹಿಂಡು ದಾಳಿ ; ಮಹಿಳೆ ಸಾವು

ಬಂಟ್ವಾಳ ತಾಲೂಕಿನಲ್ಲಿ ಕಡಜಗಳ ಹಿಂಡು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೆÇಲೀಸರು ಸೋಮವಾರ ತಿಳಿಸಿದ್ದಾರೆ ದಿನಗೂಲಿ ನೌಕರರಾದ ಮೀನಾಕ್ಷಿ ಎಂಬುವವರು ಎರಡು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಒಣ ಕೊಂಬೆಗಳನ್ನು ಸಂಗ್ರಹಿಸುತ್ತಿದ್ದಾಗ ಕಣಜಗಳ ದಾಳಿಗೆ ಒಳಗಾಗಿದ್ದರು. ಆಕೆ ಸಂಗ್ರಹಿಸಿದ ಕೊಂಬೆಗಳಲ್ಲಿದ್ದ ಕಡಜಗಳ ಹಿಂಡು ಆಕೆಯ ಮೇಲೆ ದಾಳಿ ನಡೆಸಿವೆ. ಕೂಡಲೇ ಸಮೀಪದ ಮನೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಸಮೀಪದ

ಮಂಗಳೂರು; ಕಮಿಷನರ್ ಸೀಟೇರಿದ ಮಗು

ಮಂಗಳೂರು;ಕರಾವಳಿಯ ಮಂಗಳೂರಿನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.ಅಪಘಾತದಲ್ಲಿ ಮೃತ ಪೊಲೀಸ್ ಅಧಿಕಾರಿಯ ಮಗಳನ್ನು ಕಮಿಷನರ್ ಶಶಿಕುಮಾರ್ ತನ್ನ ಕುರ್ಚಿಯಲ್ಲಿ ಕೂರಿಸಿ ಗೌರವಿಸುವ ಮೂಲಕ ಪ್ರಸಂಸೆಗೆ ಪಾತ್ರರಾಗಿದ್ದಾರೆ. 2016-17ರ ವೇಳೆಯಲ್ಲಿ ಮಂಗಳೂರಿನಲ್ಲಿ ರವಿಕುಮಾರ್ ಎಂಬವರು ಎಎಸ್ಪಿಯಾಗಿದ್ದರು.ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ 2017ರಲ್ಲಿ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು.ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ

ಪ್ರತಿಭಾ ಕುಳಾಯಿ ವಿರುದ್ದ ಅಶ್ಲೀಲ ಬರಹ ಪೋಸ್ಟ್ ಹಾಕಿದವರು ವಿರುದ್ದ ಕ್ರಮ ಕೈಗೊಳ್ಳುತ್ತೇವೆ : ಕಮೀಷನರ್

ಮಂಗಳೂರು; ಸಾಮಾಜಿಕಕಾರ್ಯಕರ್ತೆ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಾಕಾರಿ ಹಾಗೂ ಅಶ್ಲೀಲವಾಗಿ ಪೆÇೀಸ್ಟ್ ಹಾಕಿದ ಆರೋಪಿಗಳನ್ನು ಶೀಘ್ರವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸತ್ತೇವೆ ಎಂದುಮಿಷನರ್ ಶಶಿಕುಮಾರ್ ತಿಳಿಸೊದ್ದಾರೆ. ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಹೋರಾಟ ಎರಡು ಮೂರಿ ದಿನದ ಹಿಂದೆ ನಡೆದಿತ್ತು, ಈ ವೇಳೆ ಮಹಿಳಾ ಹೋರಾಟಗಾರರ ಪೋಟೋಗೆ ಅಶ್ಲೀಲವಾಗಿ ಬರಹ, ಪೋಸ್ಟ್ ಬಗ್ಗೆ ದೂರುದಾಖಲಾಗಿದೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುವುದು,ಸಾಮಾಜಿಕ

ನಾನೇ ನಾಗವಲ್ಲಿ, ಮೊನ್ನೆ ನೋಡಿದ್ದು ಕಾಂತಾರ ಪಾರ್ಟ್ 2 ಅಲ್ಲ 3″

ಸುರತ್ಕಲ್: “ನಾನೇ ಒರಿಜಿನಲ್ ನಾಗವಲ್ಲಿ, ಮೊನ್ನೆ ಸುರತ್ಕಲ್ ಟೋಲ್ ಗೇಟ್ ಬಳಿ ನೀವು ನೋಡಿದ್ದು ಕಾಂತಾರ ಚಿತ್ರದ ಎರಡನೇ ಭಾಗವಲ್ಲ ಮೂರನೇ ಭಾಗ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಹೇಳಿದರು. ಸುರತ್ಕಲ್ ಟೋಲ್ ವಿರೋಧಿ ಪ್ರತಿಭಟನೆ ಸಂದರ್ಭದ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳ ಟೈಟಲ್ ಕೊಟ್ಟು ಟ್ರೋಲ್ ಮಾಡಲಾಗುತ್ತಿದ್ದು ಈ ಕುರಿತು ಮಾತಾಡಿದ ಪ್ರತಿಭಾ ಅವರು, “ಟ್ರೋಲ್ ಒಳ್ಳೆಯದು,

ಬಂಟ್ವಾಳ ಮಣಿಹಳ್ಳದಲ್ಲಿ ಸರಣಿ ಅಪಘಾತ: ಮೆಸ್ಕಾಂ ಎಇಇ ಪ್ರವೀಣ್ ಜೋಶಿ ಮೃತ್ಯು

ಬಂಟ್ವಾಳ: ಮಣಿಹಳ್ಳದಲ್ಲಿ ಕಾರು ಮತ್ತು ಬಸ್ಸಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವಿಟ್ಲ ಮೆಸ್ಕಾಂನ ಎಇಇ ಪ್ರವೀಣ್ ಜೋಶಿ ಅವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ಎರಡು ಕಾರು ಹಾಗೂ ಬಸ್‍ಗಳ ನಡುವೆ ಅಪಘಾತ ನಡೆದಿದ್ದು, ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ವಗ್ಗದ ಮದ್ವ ಮನೆಯಿಂದ

ನನ್ನ ವಿರುದ್ದ ಮಾಡುತ್ತಿರುವ ಟ್ರೋಲ್ ನನ್ನಲ್ಲಿ ಸ್ಪೂರ್ತಿಯನ್ನು ತುಂಬುತ್ತದೆ : ಪ್ರತಿಭಾ ಕುಳಾಯಿ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದು, ಟ್ರೋಲ್ ಮಾಡಿ ನನ್ನ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ,ಅದಕ್ಕೆ ಹೆದರುವ ಹೆಣ್ಣು ಮಗಳು ಅಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮಂಗಳೂರಿನ ಮಹಾಜನಗಳೇ ನೀವು ನನ್ನ ವಿರುದ್ದ ಮಾಡುತ್ತಿರುವ ಟ್ರೋಲ್ ನನ್ನಲ್ಲಿ ಇನ್ನಷ್ಟು ನಿಮ್ಮ ಪರವಾಗಿ ನಿಲ್ಲಲು ಮತ್ತು ಸಾಮಾಜಿಕ ಹೋರಾಟಗಳಲ್ಲಿ

ಗಂಧದ ಮರ ಕದಿಯಲು ಬಂದಿದ್ದ ಇಬ್ಬರ ಬಂಧನ: ಓರ್ವ ಸಾವು

ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ವಶದಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲಾಖೆಯ ಕಲ್ಲುಹೊಳ ಕೋಟೆಯ ಆನೆ ಶಿಬಿರದ ಶೌಚಾಲಯದಲ್ಲಿ ವ್ಯಕ್ತಿ ಶವ ಪತ್ತೆಯಾಗಿದೆ. ರಾತ್ರಿ ಗಂಧದ ಮರ ಕದಿಯಲು ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಅರಣ್ಯ ಇಲಾಖೆ ಕ್ವಾರ್ಟರ್ಸ್​ನಲ್ಲಿ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಂತರ ಆನೆ ಶಿಬಿರಕ್ಕೆ ವ್ಯಕ್ತಿಯ

ಶಿರೂರು : ವಿದ್ಯುತ್ ಅವಘಡ ಉದ್ಯಮಿ, ಸಾಮಾಜಿಕ ಮುಖಂಡ ಸತೀಶ ಪ್ರಭು ಮೃತ್ಯು

ಶಿರೂರು: ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಶಿರೂರಿನಲ್ಲಿ ನಡೆದಿದೆ.ಶಿರೂರಿನ ಬಿಜೆಪಿ ಮುಖಂಡ ಉದ್ಯಮಿ,ಜನಾನುರಾಗಿ,ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸತೀಶ ಸುಬ್ರಾಯ ಪ್ರಭು (52)ಮ್ರತಪಟ್ಟ ವ್ಯಕ್ತಿಯಾಗಿದ್ದಾರೆ. ಸತೀಶ ಸುಬ್ರಾಯ ಪ್ರಭು ಅವರು, ಪ್ರಗತಿಪರ ಕೃಷಿಕರು, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಸಾಮಾಜಿಕ

ನವರಾತ್ರಿ ಹುಲಿವೇಷ ಸ್ತಬ್ಧಚಿತ್ರದಿಂದ ಬಂದ ಹಣ ಅಶಕ್ತ ಕುಟುಂಬಗಳಿಗೆ ವಿತರಣೆ

ಬಿರುವೆರ್ ಫ್ರೆಂಡ್ಸ್ ಮಂಡಾಡಿ ಮತ್ತು ಮಹಾಮ್ಮಾಯಿ ಫ್ರೆಂಡ್ಸ್ ಮಂಡಾಡಿ ಇವರ ಸಹ ಭಾಗಿತ್ವದಲ್ಲಿ ನವರಾತ್ರಿಯ ಶಾರದಾ ಶೋಭಾಯಾತ್ರೆಗೆ ಹುಲಿವೇಶದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು. ಬಂದ ಹಣವನ್ನು ಅಶಕ್ತ ಕುಟುಂಬಗಳಿಗೆ ಧನದ ರೂಪದಲ್ಲಿ, ಮತ್ತು ಮಕ್ಕಳಿಗೆ ಪುಸ್ತಕದ ರೂಪದಲ್ಲಿ ವಿತರಿಸಲಾಯಿತು. ಅರ್ಬಿಗುಡ್ಡೆ ನಿವಾಸಿಗಳಾದ ಲೋಕೇಶ ಮತ್ತು ಶ್ರೀಮತಿ ಭವಾನಿ ಅವರ ಪುತ್ರ ಆಯುಷ್ ಎಂಬ ಬಾಲಕನ ವೈದ್ಯಕೀಯ ಚಿಕಿತ್ಸೆಗಾಗಿ ನೆರವನ್ನು ಸಂಸ್ಥೆಯ ಪದಾಧಿಕಾರಿಗಳ