ದೇವಲ್ಕುಂದ ಹೊಸಿ ಹೈಗುಳಿ ಚಿಕ್ಕು ಸಹಪರಿವಾರಗಳ ದೈವಸ್ಥಾನ : ಜ.25ರಂದು ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನ

ಬೈಂದೂರಿನ ಬಾಳಿಕೆರಿ ದೇವಲ್ಕುಂದ ಹೊಸಿ ಹೈಗುಳಿ ಚಿಕ್ಕು ಸಹಪರಿವಾರಗಳ ದೈವಸ್ಥಾನದಲ್ಲಿ ಹಾಲುಹಬ್ಬದ ಪ್ರಯುಕ್ತ ದಿ.ಅಕ್ಕಯ್ಯ ಶೆಡ್ತಿ ಮಕ್ಕಳು ಸೊಸೆ, ಮೊಮ್ಮಕ್ಕಳು ಜನ್ನಾಲ್ ಗೋಳಿಮನೆ ಕಬೈಲ್ಮನೆ ಇವರ ವತಿಯಿಂದ ಜನವರಿ 25ರಂದು ಕಾಲಮಿತಿ ಯಕ್ಷಗಾನ ಬೈಲಾಟ ನಡೆಯಲಿದೆ.

ರಾತ್ರಿ 7.30ರಿಂದ ಬೆಂಕಿನಾಥೇಶ್ವರ ದಶಾವತರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಬಾಳ ಕಳವಾರು ಮಂಗಳೂರು ಇವರಿಂದ ಯಕ್ಷಗಾನ ಬಯಲಾಟ ದೈವ ಭಕ್ತಿ ಸಾರುವ ಸೂಪರ್ ಹಿಟ್ ಕಥಾನಕ ಸತ್ಯದ ಸ್ವಾಮಿ ಕೊರಗಜ್ಜ ಎಂಬ ಪುಣ್ಯ ಕಥಾಭಾಗವನ್ನ ಆಡಿತೊರಿಸಲಿರುವರು. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮೂಕ್ತೇಸರರು ಹಾಲಾಡಿ ಮನೆ ಕುಟುಂಬಸ್ಥರು, ಹೊಸಿ ಹೈಗುಳಿ ಯಕ್ಷಮಿತ್ರ ಬಳಗ ಬಾಳಿಕೆರಿ ದೇವಲ್ಕುಂದ ಹಾಗೂ ಊರ ಗ್ರಾಮಸ್ಥರು ಹಿಂದು ಜಾಗರಣ ವೇದಿಕೆ ಬಾಳಿಕೆರಿ ಘಟಕದವರು ವಿನಂತಿಸಿದ್ದಾರೆ.
