Home Posts tagged V4News (Page 3)

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ : ಅಧ್ಯಕ್ಷರಾಗಿ ಕೆ.ಸಿ.ಸದಾನಂದ,ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿ ಆಯ್ಕೆ

ಸುಳ್ಯ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ.ಸಿ.ಸದಾನಂದ ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಸಹಕಾರ ಇಲಾಖೆಯ ಶೋಭಾ ಎನ್.ಎಸ್.

ಮಂಗಳೂರು : ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಬಾಲಾಲಯ ಪ್ರತಿಷ್ಠೆ

ಮಂಗಳೂರು : ಶಕ್ತಿನಗರ ಶ್ರೀ ಕೃಷ್ಣ ಭಜನಾ ಮಂದಿರದ ರಜತಮಹೋತ್ಸವದ ಪ್ರಯುಕ್ತ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಪುನಃಪ್ರತಿಷ್ಠೆ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಬಾಲಾಲಯ ಪ್ರತಿಷ್ಠೆಯು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾತಃಕಾಲ ಬ್ರಹ್ಮಶ್ರೀ ಕದ್ರಿ ಕೃಷ್ಣ ಅಡಿಗರ ನೇತೃತ್ವದಲ್ಲಿ ಗಣಪತಿ ಹೋಮ, ಮೃತ್ಯುಂಜಯ ಹೋಮ ನಡೆದು, ಸಾನಿಧ್ಯದಲ್ಲಿ ಸಂಕೋಚದ ವಿಧಿ ವಿಧಾನಗಳನ್ನು ನಡೆಸಿ ಶ್ರೀ ಕೃಷ್ಣದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ

ಅಪ್ಪಣ್ಣ ಕಟ್ಟೆಯ ಶೆಟ್ಟಿ ಆಟೋ ಪಾರ್ಕ್ ಮೇಲ್ಛಾವಣಿ ಅಭಿವೃದ್ಧಿ – ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

ನಗರದ ಅಪ್ಪಣ್ಣ ಕಟ್ಟೆಯ ಶೆಟ್ಟಿ ಆಟೋ ಪಾರ್ಕ್ ನ ಮೇಲ್ಛಾವಣಿಯನ್ನು ಶಾಸಕರ ನಿಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಮಂಗಳೂರು ಮಹಾನಗರ ಪಾಲಿಕೆಯ 41ನೇ ಸೆಂಟ್ರಲ್ ವಾರ್ಡಿನ ವ್ಯಾಪ್ತಿಯ ಈ ಆಟೋ ಪಾರ್ಕ್ ಜಿಲ್ಲೆಯ ಅತೀ ಹಳೆಯ ನಿಲ್ದಾಣಗಳಲ್ಲಿ ಒಂದಾಗಿದ್ದು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಬಂದಿದೆ. ದಿನನಿತ್ಯ ದುಡಿಯುವ ಆಟೋ ಚಾಲಕರದ್ದು ಶ್ರಮಿಕ ವರ್ಗವಾಗಿದ್ದು ಅವರುಗಳು

ಮೂಡುಬಿದಿರೆ : 2ನೇ ವಷ೯ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ : ಶ್ರೀ ಇಟಲ ಬಾಕ್ಯಾರ್ ಫ್ರೆಂಡ್ಸ್ ದರೆಗುಡ್ಡೆ ಇದರ ವತಿಯಿಂದ ದಿ |ಬಿ. ಜಯರಾಜ್ ಕೆಲ್ಲಪುತ್ತಿಗೆ ಅರಮನೆ ಇವರ ಸ್ಮರಣಾರ್ಥ 2ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶನಿವಾರ ನಡೆಯಿತು.ರಾಜವರ್ಮ ಬೈಲಂಗಡಿ ಹಾಗೂ ರಾಜೇಂದ್ರ ಬೈಲಂಗಡಿ ಪೆರಿಂಜೆ ಅವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ದರೆಗುಡ್ಡೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ

ಮೂಡುಬಿದಿರೆ : ತರಕಾರಿ ಮಾರುಕಟ್ಟೆಯ ಸುಂಕ ವಸೂಲಿ ಗುತ್ತಿಗೆ ರದ್ದು ಪಡಿಸಿದ ಪುರಸಭೆ

ಮೂಡುಬಿದಿರೆ : ಇಲ್ಲಿನ ಪುರಸಭಾ ವ್ಯಾಪ್ತಿಯ ಸ್ವರಾಜ್ಯ ಮೈದಾನದಲ್ಲಿ ಕಾಯ೯ಚರಿಸುತ್ತಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ವರಿ ವಸೂಲಿನ ಗುತ್ತಿಗೆಯನ್ನು ಪುರಸಭೆಯು ಸೋಮವಾರ ಸಂಜೆ ರದ್ದುಪಡಿಸಿದೆ.ಕಳೆದ ಡಿಸೆಂಬರ್ 20 ರಂದು ನಡೆದಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ಬಹಿರಂಗ ಏಲಂ ಪ್ರಕ್ರಿಯೆಯಲ್ಲಿ ನಿಡ್ಡೋಡಿಯ ಸುಂದರ ಪೂಜಾರಿ ಅವರು ಅತೀ ಹೆಚ್ಚು ಬಿಡ್ಡು ( 42,00,350) + 7,56,073 ( 18% ಜಿ.ಎಸ್.ಟಿ)ದಾರರಾಗಿ ವರಿವಸೂಲಿನ ಹಕ್ಕನ್ನು

ಪುತ್ತೂರು : ಕೋಟಿ ಚೆನ್ನಯ ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧವಾಗಿರುವ ಪುತ್ತೂರಿನ 32ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಮಾ.1ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ಕಂಬಳವನ್ನು ಉತ್ತಮವಾಗಿ ನಡೆಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಹೇಳಿದರು. ಅವರು ಶನಿವಾರ ಪುತ್ತೂರು ದೇವಳದ ವಠಾರದಲ್ಲಿ ಕಂಬಳದ ಆಮಂತ್ರಣ ಪತ್ರಿಕೆಯನ್ನು

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆ. 11 ರಿಂದ 15 ರವರೆಗೆ ಕುಂಭ ಮಹೋತ್ಸವ

ಮಂಗಳೂರು:ದ.ಕ ಜಿಲ್ಲೆಯ ಕುಲಶೇಖರದಲ್ಲಿರುವ ಅತ್ಯಂತ ಪುರಾತಣ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ಪೆ 11 ರಿಂದ 15 ತನಕ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಶುಭಾಶಿರ್ವಾದಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯ ವಾಮಂಜೂರು ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ಜರುಗಲಿರುವುದು.ಫೆ. 11 ಮಂಗಳವಾರ ಸಂಜೆ 3 ರಿಂದ ಭಜನಾ, ಕುಣಿತ ಭಜನೆಯೊಂದಿಗೆ ಸಂಜೆ ರಾಜಾಂಗಣದಲ್ಲಿರುವ ಭವ್ಯ ವೇದಿಕೆಯಲ್ಲಿ ಧಾರ್ಮಿಕ ಸಭೆಯು. ಶ್ರೀ

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ ಅನುರಾಧಾ ಕುರುಂಜಿ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರು, ಹಾಗೂ ಎನ್ನೆಂಸಿಯ ಉಪನ್ಯಾಸಕರೂ ಆದ ಡಾ. ಅನುರಾಧಾ ಕುರುಂಜಿ ಯವರು ಕರ್ನಾಟಕ‌ ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಎನ್ ಎಸ್ ಎಸ್ ಕೋಶ ಮತ್ತು .ಮಂಗಳೂರಿನ ಯೇನೆಪೋಯ ಡೀಮ್ಡ್ ವಿಶ್ವ‌ವಿದ್ಯಾಲಯದ ಸಹಯೋಗದಲ್ಲಿ ಫೆ 3 ರಿಂದ 7 ರವರೆಗೆ ಏನೇಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಪದವಿ,

ಮಂಗಳೂರು: ಫೆ.21ಕ್ಕೆ ಭಾವನೆಗಳೇ ಜೀವಾಳವಾಗಿರುವ “ಭಾವ ತೀರ ಯಾನ” ತೆರೆಗೆ!

ಮಂಗಳೂರು: ಆರೋಹ ಫಿಲಂಸ್ ಬ್ಯಾನರ್‌ನ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿರುವ ‘ಭಾವ ತೀರ ಯಾನ’ ಸಿನಿಮಾ ಇದೇ ತಿಂಗಳ 21ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ“ ಎಂದು ಚಿತ್ರ ನಿರ್ದೇಶಕ ಮಯೂರ್ ಅಂಬೆಕಲ್ಲು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ತಾರಾಗಣದಲ್ಲಿ ರಮೇಶ್ ಭಟ್, ವಿದ್ಯಾಮೂರ್ತಿ, ತೇಜಸ್ ಕಿರಣ್, ಆರೋಹಿ ನೈನ, ಅನೂಷಾ ಕೃಷ್ಣ, ಚಂದನಾ ಅನಂತಕೃಷ್ಣ, ಸಂದೀಪ್ ರಾಜಗೋಪಾಲ್, ಸಿತಾರಾ, ಶ್ರೀನಿವಾಸ ಕೆಸ್ತೂರ್,

ಉಡುಪಿ: ನೇತ್ರಜ್ಯೋತಿ ಕಾಲೇಜಿನಲ್ಲಿ ಸಂಶೋಧನಾ ವಿಧಾನ ಕಾರ್ಯಗಾರ

ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ಅಧ್ಯಾಪಕರಿಗೆ ಸಂಶೋಧನಾ ವಿಧಾನ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಕೊಡಗು ಮೆಡಿಕಲ್ ಕಾಲೇಜಿನ ಸಮುದಾಯದ ಔಷಧ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ರಾಮಚಂದ್ರ ಕಾಮತ್ ,ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರಿನ ಅಸೋಸಿಯೇಟ್ ಪ್ರೊಫೆಸರ್ ಡಾಕ್ಟರ್ ಪ್ರಚೇತ್,ಮೈಸೂರ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾಕ್ಟರ್ ಸುಮಂತ್ ರವರು