ಉಳ್ಳಾಲ : ಕರಾವಳಿಯ ಅತೀ ಎತ್ತರದ ಧ್ವಜ ಸ್ತಂಭ
ಉಳ್ಳಾಲ ನಗರಕ್ಕೆ ಪ್ರವೇಶಿಸುವ ಹೆಬ್ಬಾಗಿಲಾಗಿರುವ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಳ್ಳಲಿರುವ 110 ಅಡಿ ಎತ್ತರದ ಧ್ವಜಸ್ತಂಭ ಏರಿಸುವ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಉಳ್ಳಾಲ ಓವರ್ ಬ್ರಿಡ್ಜ್ ಬಳಿ ಮಂಗಳವಾರ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಳ್ಳಾಲದ ಜನತೆಯ ಗೌರವದ ಸಂಕೇತವಾಗಿ ಈ ಧ್ವಜ ಸ್ತಂಭ ನಿರ್ಮಾಣವಾಗಿದೆ. ಅದರ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದ್ದು ಸ್ವಾತಂತ್ರ್ತೋತ್ಸವ ಅಮೃತ ಮಹೋತ್ಸವ ಸಂದರ್ಭ ದಾಖಲೆ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಉಳ್ಳಾಲ ತಾಲೂಕಿನ ಪ್ರಥಮ ಸೌಭಾಗ್ಯವಾಗಿ ಇದು ಹಾರಾಡಲಿದೆ. ಕುತ್ತಾರು ದೇರಳಕಟ್ಟೆ ರಸ್ತೆಯ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಶ್ರೀನಿವಾಸ ಮಲ್ಯ ಪ್ರತಿಮೆ ಮತ್ತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಕೆಲವರಲ್ಲಿ ಉಳ್ಳಾಲ ಆ ದೇಶ ಈ ದೇಶ ಕಂಡಂತೆ ಎಂಬ ಭಾವನೆ ಹೋಗಲಿದೆ. ಉಳ್ಳಾಲ ತಾಲೂಕಿನ ಈ ಜಂಕ್ಷನ್ ನಲ್ಲಿ ಒಟ್ಟು ಎರಡು ಧ್ವಜಸ್ತಂಭ ನಿರ್ಮಾಣವಾಗಲಿದ್ದು ಎರಡು ಸ್ತಂಭಕ್ಕೆ 35ಲಕ್ಷ ವ್ಯಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭಸ್ಥಳಾಂತರ ಮಾಡಲೂ ಅಡ್ಡಿಯಲ್ಲಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ದೀಪಕ್ ಪಿಲಾರ್ , ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮುರಲಿ ತೊಕ್ಕೊಟ್ಟು, ನಗರಸಭೆಯ ಕೌನ್ಸಿಲರ್ ಬಾಜಿಲ್ ಡಿಸೋಜ, ರವಿಚಂದ್ರ ಗಟ್ಟಿ, ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.