ತಪ್ಪು ಮಾಹಿತಿ ನೀಡಿದ ಸಚಿವರು ಕ್ಷಮೆ ಯಾಚಿಸಬೇಕು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿಕೆ

ಹತ್ತನೆ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಕದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈ ಬಿಟ್ಟಿಲ್ಲ ಎಂದು ಮಾಧ್ಯಮ ಗೋಷ್ಠಿಯಲ್ಲಿ ಸುಳ್ಳು ಹೇಳಿಕೆ ನೀಡಿದ ಸಚಿವ ರಾದ ಸುನಿಲ್ ಕುಮಾರ್, ಕೋಟ ಶ್ರೀ ನಿವಾಸ ಪೂಜಾರಿ ಸಾರ್ವಜನಿಕ ರಲ್ಲಿ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಮಿಥುನ್ ರೈ ಒತ್ತಾಯಿಸಿದ್ದಾರೆ. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ಆಗಿರುವ ಲೋಪದ ಬಗ್ಗೆ ಕಾಂಗ್ರೆಸ್ ಬಹಿರಂಗ ಪಡಿಸಿದಾಗಲೂ ಜವಾಬ್ದಾರಿ ಯು ತ ಸ್ಥಾನದಲ್ಲಿದ್ದ ಸಚಿವರು ಅಂತಹ ಯಾವ ಲೋಪವು ಆಗಿಲ್ಲ,ಅವರ ಪಠ್ಯ ಕೈ ಬಿಟ್ಟಿಲ್ಲ ಎನ್ನುವ ಹೇಳಿಕೆ ನೀಡಿರುವುದು ಸರಿಯಲ್ಲ. ಬಿಜೆಪಿ ಜಿಲ್ಲಾ ಧ್ಯಕ್ಷ ರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅಪಪ್ರಚಾರ ಮಾಡತೊಡಗಿದರು. ಈಗ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗ ಳ ಪ್ರತಿರೋಧ ದ ಬಳಿಕ ಶಿಕ್ಷಣ ಸಚಿವರು ಹಿಂದೆ ಪಠ್ಯ ದಲ್ಲಿ ಇದ್ದಂತೆ ನಾರಾಯಣ ಗುರುಗಳ ಪಠ್ಯ ವನ್ನು 10ತರಗತಿ ಯ ಸಮಾಜ ವಿಜ್ಞಾನ ಪಠ್ಯ ದಲ್ಲಿ ಮರು ಸೇರ್ಪಡೆ ಮಾಡಲು ಆದೇಶ ಮಾಡಿರುವು ದಾಗಿ ಹೇಳಿಕೆ ನೀಡಿರುವುದರಿಂದ ಸತ್ಯ ಸಂಗತಿ ಬಯಲಾಗಿದೆ.ಸುಳ್ಳು ಆರೋಪ ಮಾಡಿದವರು ತಪ್ಪು ಸಂದೇಶ ನೀಡಿದ ಸಚಿವರು ನೈತಿಕ ನೆಲೆಯಲ್ಲಿ ಕ್ಷಮೆ ಕೇಳಬೇಕು. ಈ ಹೋರಾಟದಲ್ಲಿ ಸಹಕಾರ ನೀಡಿ ದ ಎಲ್ಲಾ ಸಂಘ ಸಂಸ್ಥೆ ಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮಿಥುನ್ ರೈ ತಿಳಿಸಿದ್ದಾರೆ.ಪರಿಷ್ಕರಣಾ ಸಮಿತಿ 10ತರಗತಿಯ ಸಮಾಜ ವಿಜ್ಞಾನ ಪಠ್ಯ ದಲ್ಲಿದ್ದ ನಾರಾಯಣ ಗುರುಗಳ ಪಠ್ಯ ವನ್ನು ತೆಗೆದು ಕನ್ನಡ ಭಾಷಾ ಪಠ್ಯ ದಲ್ಲಿ ಸೇರಿಸಿ ನಾರಾಯಣ ಗುರುಗಳ ಪಠ್ಯ ವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸ ದಂತೆ ಮಾಡಲಾಗಿತ್ತು.ಅದೇ ರೀತಿ ಕರ್ನಾಟಕ ಏಕೀಕರಣ ದ ಅಗ್ರಗಣ್ಯ ಹೋರಾಟ ಗಾರರಾಗಿದ್ಥ ಕೈಯಾರ ಕಿಂಞಣ್ಣ ರೈಗಳ ಪಠ್ಯ ವನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಕಡೆಗಣಿಸಲಾಗಿದೆ ಎಂದು ಮಿಥುನ್ ರೈ ಆರೋಪಿಸಿದ್ದಾರೆ.ಸುದ್ಧಿಗೋಷ್ಠಿಯಲ್ಲಿ ಮನಪಾ ಸದಸ್ಯ ರಾದ ಪ್ರವೀಣ್ ಚಂದ್ರ ಆಳ್ವ,ನವೀನ್ ಡಿ ಸೋಜ,ಪ್ರಕಾಶ್ ಸಾಲ್ಯಾನ್,ಅನಿಲ್ ಕುಮಾರ್ ,ಜಿಲ್ಲಾ ಕಾಂಗ್ರೆಸ್ ನಝೀರ್ ಬಜಾಲ್ ಉಪಸ್ಥಿತರಿದ್ದರು.