ಬೈಕಂಪಾಡಿ :ಫಾಕ್ಟರಿಯಲ್ಲಿ ಕೋಟ್ಯಾಂತರ ಮೌಲ್ಯದ ಕಚ್ಚಾ ಸಾಮಾಗ್ರಿ ಕಳವು
ಮಂಗಳೂರು ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಬ್ರೈಟ್ ಪ್ಯಾಕೇಜಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಗುಜರಾತ್‍ನಿಂದ ಬರುತ್ತಿದ್ದ ಕೋಟ್ಯಾಂತರ ಪ್ಲಾಸ್ಟಿಕ್ ಕಚ್ಛಾ ಸಾಮಾಗ್ರಿಗಳನ್ನು ಕಳವು ಮಾಡಿ ಮಾರಾಟ ಮಾಡಿ ಕಂಪೆನಿಗೆ ಮೋಸ ಮಾಡಿದ ಕಂಪೆನಿಯ ನೌಕರ ಹಾಗೂ ಇತರ ಮೂರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೆÇಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿ ಪ್ರಕರಣವನ್ನು ಭೇದಿಸಿರುತ್ತಾರೆ.