ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ಅಷ್ಟಮಿ-ಚೌತಿ ಸಂಭ್ರಮ

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ರಘುನಾಥ್ ಅಂಚನ್ ರವರ ಮುಂದಾಳತ್ವದಲ್ಲಿ “ಅಷ್ಟಮಿ-ಚೌತಿ” ಆಚರಣೆ ಕಾರ್ಯಕ್ರಮ “ಗ್ರಾಂಡ್ ಕತಾರ್ ಪ್ಯಾಲೇಸ್ “ನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ಅಂಚನ್ ರವರು ಸಂಘದ ಸಾಧನೆ, ಒಗ್ಗಟ್ಟು ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಕೃಷ್ಣ – ರಾಧೆ ಛದ್ಮವೇಷ ಸ್ಪರ್ಧೆಗೆ ಅತ್ಯಂತ ಉಲ್ಲಾಸದಿಂದ ರಂಗು ರಂಗಿನ ಬಟ್ಟೆ ತೊಟ್ಟ ಪುಟಾಣಿಗಳು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು..

ದಿಬ್ಬಣಗಿತ್ತಿಯರಂತೆ ಸಿಂಗರಿಸಿಗೊಂಡ ಮಂಗಳಾಂಗಿಯರು ನವೋಲ್ಲಾಸದ ಕಡಲಲ್ಲಿ ಓಲಾಡಿದರೆ, ಸಾಂಪ್ರದಾಯಿಕ ಉಡುಗೆತೊಟ್ಟು ಬಂದ ಗಂಡಸರು ಕಾರ್ಯಕ್ರಮಕ್ಕೆ ಮೆರಗನ್ನು ಕೊಟ್ಟರು.. ಕೃಷ್ಣ – ರಾಧೆ ಛದ್ಮವೇಷ ಸ್ಪರ್ಧೆಯ ನಿರ್ವಹಣೆಯನ್ನು ಪ್ರತಿಭಾನ್ವಿತ ಪುಟಾಣಿಗಳಾದ ಭೂಮಿಕಾ ರಘುನಾಥ್ ಅಂಚನ್ ಮತ್ತು ಶಾನ್ವಿ ಶರತ್ ರವರು ನಡೆಸಿಕೊಟ್ಟು ಎಲ್ಲರ ಗಮನ ಸೆಳೆದರು. ಸ್ಪರ್ಧೆಯ ತೀರ್ಪುಗಾರ್ತಿಯಾಗಿ ಭರತನಾಟ್ಯ ವಿದ್ವತ್ ಶ್ರೀಮತಿ ಸಂಜನಾ ಜೀವನ್ ಅವರು ಸಹಕರಿಸಿದರು. ಶ್ರೀಮತಿ ಸೀಮಾ ಉಮೇಶ್ ಅವರು ಪ್ರಶಸ್ತಿ ಪ್ರದಾನ ಮಾಡಲು ಸಹಕರಿಸಿದರು.

ಶ್ರೀ ವಿಜಯ ಸುವರ್ಣ ಅವರು “ಪ್ರಾಣಾಯಾಮ -ಧ್ಯಾನ -ಆಹಾರ” ವಿಷಯದ ಬಗ್ಗೆ ವಿಶೇಷ ಮಾಹಿತಿ ಕೊಟ್ಟರೆ ಸಂಘದ ಉಪಾಧ್ಯಕ್ಷರಾದ ಶ್ರೀ ಅಮಿತ್ ಪೂಜಾರಿ ಯವರು” ಅಷ್ಟಮಿ- ಚೌತಿ ಆಚರಣೆ, ಸಂಭ್ರಮ ಮತ್ತು ಮಹತ್ವ”ದ ಬಗ್ಗೆ ಮಾತನಾಡಿದರು. ಗಣೇಶ- ಕೃಷ್ಣನ ಆರಾಧನೆಯೊಂದಿಗೆ ಭಜನಾ ಕಾರ್ಯಕ್ರ್ರಮ ಎಲ್ಲರನ್ನು ಭಕ್ತಿ ರಸದಲ್ಲಿ ಮುಳುಗಿಸಿತು. ನೂರಕ್ಕೂ ಮಿಕ್ಕಿದ ಭಾಂದವರ ಸಮ್ಮಿಲನ, ಬಿಲ್ಲವಾಸ್ ಕತಾರ್ ನ ಪತಾಕೆಯನ್ನು ಮತ್ತೊಮ್ಮೆ ಕತಾರ್ ನ ಮಣ್ಣಲ್ಲಿ ಎತ್ತಿ ತೋರಿಸಿತು.

ಶ್ರೀ ಅಜಯ್ ಕೋಟ್ಯಾನ್ ಅವರು ಧ್ವನಿ ವ್ಯಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು ಕವಿರಾಜ್ ಬಂಗೇರ ಅವರು ಧನ್ಯವಾದ ಸಮರ್ಪಣೆ ಮಾಡಿದರು . ಶ್ರೀ ಉಮೇಶ್ ಪೂಜಾರಿ, ಸಂದೀಪ್ ಮಲ್ಲಾರ್, ಕಿಶೋರ್ ಅಂಚನ್, ಜಯರಾಜ್ ಮತ್ತು ಮಂಜು ಕರಿಗಾರ್ ಅವರು ಕಾರ್ಯಕ್ರಮದ ಎಲ್ಲಾ ಹೊಣೆಗಾರಿಕೆಯನ್ನು ಚೊಕ್ಕವಾಗಿ ನೆರವೇರಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಅಪರ್ಣ ಶರತ್ ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ನಿರ್ವಹಿಸಿದರು.ಕಾರ್ಯಕ್ರಮದ ಸಂಪೂರ್ಣನೇತ್ರತ್ವವನ್ನು ಜಯರಾಮ ಸುವರ್ಣ ಅವರು ವಹಿಸಿದ್ದರು

Related Posts

Leave a Reply

Your email address will not be published.