Home ಕರಾವಳಿ Archive by category ಮಂಗಳೂರು (Page 167)

ಪುನರ್ವಸು ಆಯುರ್ವೇದ ಕ್ಲಿನಿಕ್ ಕ್ಕೋಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಶುಭಾರಂಭ

ಮಂಗಳೂರಿನ ಪದವಿನಂಗಡಿ ಸಮೀಪದಲ್ಲಿ ಪುನರ್ವಸು ಆಯುರ್ವೇದ ಕ್ಲಿನಿಕ್ ಮತ್ತು ಕೋಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಶುಭಾರಂಭಗೊಂಡಿತು.ಆಯುರ್ವೇದವು ಬಹಳ ಹಿಂದಿನಿಂದಲೂ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತ ಬಂದಿದೆ. ನೈಸರ್ಗಿಕ ಪ್ರಕ್ರಿಯೆಯ ಮೂಲಕ ಮತ್ತು ಸಾಂಪ್ರದಾಯಿಕ ಔಷಧಿಗಳ ಮೂಲಕ ಪರಿಹಾರವನ್ನು ಆಯುರ್ವೇದ ನೀಡುತ್ತದೆ. ಮಂಗಳೂರಲ್ಲಿ

ಮಂಗಳೂರಿನಿಂದ ಉಡುಪಿಗೆ ತೆರಳಿದ ರಾಜ್ಯಪಾಲರು

ಮಂಗಳೂರು : ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಆ.25ರ ಗುರುವಾರ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕೇಂದ್ರ ಸಚಿವರಾದ ಶೋಭಾ ಕರಂದಾಜ್ಲೆ ಅವರು ಈ ವೇಳೆ ರಾಜ್ಯಪಾಲರೊಂದಿಗೆ ಆಗಮಿಸಿದರು. ಇಂಧನ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.,

ಸುರತ್ಕಲ್ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಸಭೆ

ಸುರತ್ಕಲ್ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಸಭೆ : “ಒಂದು ತಿಂಗಳಲ್ಲಿ ಟೋಲ್ ಗೇಟ್ ತೆರವುಗೊಳ್ಳುತ್ತದೆ” ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಹೇಳಿಕೆ ಹಾಗೂ ಒಂದು ವರ್ಷ ಅವಧಿಗೆ ಟೋಲ್ ಸಂಗ್ರಹ ಗುತ್ತಿಗೆ ನವೀಕರಣ ಗೊಂಡಿರುವ ವಿಚಾರಗಳ ಕುರಿತು ವಿಷದವಾಗಿ ಚರ್ಚಿಸಲಾಯಿತು. ಟೋಲ್ ತೆರವಿಗೆ ಅಧಿಕೃತ ದಿನಾಂಕ ಘೋಷಿಸದೆ ಕೇವಲ ಬಾಯ್ಮಾತಿನ ಭರವಸೆಗಳನ್ನು ಹಿಂದಿನ ಅನುಭವಗಳ ಆಧಾರದಲ್ಲಿ ನಂಬಲು‌ ಸಾಧ್ಯವಿಲ್ಲ ಎಂಬ ಅಭಿಪ್ರಾಯ

ಡಾ. ದುರ್ಗಾಪ್ರಸಾದ್ ಅವರಿಗೆ ವೈದ್ಯ ಶ್ರೇಷ್ಠ ಪ್ರಶಸ್ತಿ

ಮಂಗಳೂರಿನ ತೆಂಕ ಎಡಪದವಿನವರಾದ ಡಾ. ದುರ್ಗಾಪ್ರಸಾದ್ ಅವರಿಗೆ ಉತ್ತಮ ವೈದ್ಯಕೀಯ ಸೇವೆಗಾಗಿ ಶ್ರೇಷ್ಟ ವೈದ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಮೀಣ ಪ್ರದೇಶಗಳಾದ ಪೆರುವಾಯಿ ಮತ್ತು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ವರ್ಷಗಳಲ್ಲಿ ದುಡಿದು ಸಮುದಾಯ ಆರೋಗ್ಯ ಕೇಂದ್ರ ವಾಮದಪದವನ್ನು ರಾಜ್ಯದಲ್ಲಿಯೇ ಮಾದರಿ ಆರೋಗ್ಯ ಕೇಂದ್ರವನ್ನಾಗಿ ರೂಪಿಸಿದ ಹಿರಿಮೆ ಇವರಿಗೆ ಸಲ್ಲಿತ್ತದೆ.

v4 ಡಿಜಿಟಲ್ ಇನ್ಫೋಟೆಕ್‌ನ ಸೆಕ್ಯೂರಿಟಿ ನಿಧನ

ಮಂಗಳೂರಿನ ಯೆಯ್ಯಾಡಿಯ V4 ಡಿಜಿಟಲ್ ಇನ್ಫೋಟೆಕ್‌ನ ಸೆಕ್ಯೂರಿಟಿ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜು(74) ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಕಳೆದ ಹಲವಾರು ವರ್ಷಗಳಿಂದ V4 ಮೀಡಿಯಾದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೂಲತಃ ಮಡಿಕೇರಿಯಾಗಿರುವ ಇವರು, ಮಂಗಳೂರಲ್ಲಿ ಬಂದು ನೆಲೆಸಿದ್ದರು. ಇಂದು ಮಡಿಕೇರಿಯ ಶುಂಠಿಕೊಪ್ಪದಲ್ಲಿ ಅಂತ್ಯ ಸಂಸ್ಕಾರ

ಐಬಿಬಿಐ ನಡೆಸಿದ ಮೌಲ್ಯಮಾಪಕರ ಪರೀಕ್ಷೆ : ಸಿಎ ನಿತಿನ್ ಬಾಳಿಗಾ ತೇರ್ಗಡೆ

ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸಿಎ ನಿತಿನ್ ಬಾಳಿಗಾ ಅವರು ಇತ್ತೀಚೆಗೆ ಐಬಿಬಿಐ ನಡೆಸಿದ ಕ್ಯಾಟಗರಿ ಫೈನಾನ್ಸಿಯಲ್ ಅಸೆಟ್ ಸೆಕ್ಯುರಿಟೀಸ್ ವಿಭಾಗದ ಮೌಲ್ಯಮಾಪಕರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಹಣಕಾಸು ಆಸ್ತಿಗಳಿಗೆ ನೋಂದಾಯಿತ ಮೌಲ್ಯಮಾಪಕರಾಗಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸಿಎ ನಿತಿನ್ ಬಾಳಿಗಾ ಅವರು ಮೂಲತಃ ಮಂಗಳೂರಿನ ಉರ್ವ ಮಾರ್ಕೇಟ್‍ನ ನಿವಾಸಿಯಾಗಿದ್ದಾರೆ.

ಸೆ.2 : ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆ.2ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷರು ಹಾಗೂ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು, ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ವೈ ಭರತ್ ಶೆಟ್ಟಿ ಅವರೊಂದಿಗೆ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.ಈ ವೇಳೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಪೊಲೀಸ್

ಮೊಗವೀರ ಗಾಟ್ ಟ್ಯಾಲೆಂಟ್ ಟೈಟಲ್ ಸಾಂಗ್ ಬಿಡುಗಡೆ

ಸಿನಿ ಗ್ಯಾಲಕ್ಸಿ ಅರ್ಪಿಸುವ ಮೋಗವೀರ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದ ಧ್ವನಿ ಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಉಡುಪಿ ಮತ್ತು ದ.ಕ.ಜಿಲ್ಲಾ ಮೀನು ಮಾರಾಟಗಾರರ ಪೆಡರೆಸನ್ ಮಂಗಳೂರು ಇದರ ಜಿಲ್ಲಾ ಅಧ್ಯಕ್ಷರಾದ ಯಶಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ರಿಯಾಲಿಟಿ ಶೋನ ಧ್ವನಿ ಸುರುಳಿ, ಪೆÇೀಸ್ಟರ್

ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು

ಕೊಲೆಯತ್ನ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದ ವೇಳೆ ತಪ್ಪಿಸಲೆತ್ನಿಸಿದ ಆರೋಪಿಗೆ ಪೊಲೀಸರು ಗುಂಡೇಟು ಹಾಕಿದ ಘಟನೆ ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಡ್ಯಾರ್ ಪದವು ಬಳಿ ಈ ಘಟನೆ ಸಂಭವಿಸಿದೆ. ನಗರದ ಗುಂಡೇಟು ಬಿದ್ದ ವ್ಯಕ್ತಿ ಮುಸ್ತಾಕ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಿಸ್ತಾ ಯಾನೆ ಮುಸ್ತಾಕ್ ಗುಂಡೇಟಿಗೊಳಗಾದ

ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ಕ್ರಮ ಜರುಗಿಸದಿದ್ದಲ್ಲಿ‌ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗ ಜಡಿಯುತ್ತೇವೆ : ಮುನೀರ್ ಕಾಟಿಪಳ್ಳ

  ಪರಿಸರ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವ, ಸುತ್ತಲ ಗ್ರಾಮಗಳ ಜನರ ಬದುಕನ್ನು ನರಕ ಸದೃಶಗೊಳಿಸಿರುವ ಎಸ್ಇಝಡ್, ಅದಾ‌‌ನಿ ವಿಲ್ಮಾ, ರುಚಿಗೋಲ್ಡ್, ಯು  ಬಿ ಬಿಯರ್ ಸಹಿತ ಕೈಗಾರಿಕೆ ಘಟಕಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.  ಅವರು ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ