Home Archive by category Fresh News (Page 25)

Apsara Ice Creams open in New Location

Kamakshi Ventures Franchisee of Apsara Ice Creams, the most well-known ice cream store in Mumbai, is opening a second location in Mangalore on Monday 11th March 2024 at 11.00am Scoops will be discounted by 50% from 11th to 13th March at Mannagudda store. Venue:Apsara Ice creams Ground Floor,

ಮಂಗಳೂರು: ಜನಪ್ರಗತಿಯ ಪಂಜು ಪುಸ್ತಕ ಬಿಡುಗಡೆ: ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರಿನ ಬಲ್ಮಠದ ಸಹೋದಯ ಹಾಲ್‌ನಲ್ಲಿ ಕರ್ನಾಟಕ ಅಧ್ಯಯನ ಕೇಂದ್ರ ಮತ್ತು ಬಂಟಮಲೆ ಅಕಾಡೆಮಿ ಗುತ್ತಿಗಾರು, ಸುಳ್ಯ ಅವರ ವತಿಯಿಂದ ಜನಪ್ರಗತಿಯ ಪಂಜು ಎಂಬ ಪುಸ್ತಕ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸದ್ಯ 95ರ ಪ್ರಾಯದವರಾದ ಕನ್ನಡ ಪತ್ರಿಕೋದ್ಯಮದ ಹಿರಿಯರು ಮತ್ತು ಒಂದು ಕಾಲದಲ್ಲಿ ತಮ್ಮ ತೀಕ್ಷ್ಣ ಪತ್ರಿಕೋದ್ಯಮಕ್ಕೆ ಪ್ರಸಿದ್ಧರಾಗಿದ್ದ ಕಲ್ಲೆ ಶಿವೋತ್ತಮರಾವ್ ಅವರ ಬಗೆಗೆ ಹೊರ ಬಂದ ಕೃತಿಯಿದು. 60-70ರ ದಶಕದಲ್ಲಿ

ಮುಡಿಪು: ಕಾರು ಢಿಕ್ಕಿ: ಗಲ್ಫ್ ಉದ್ಯೋಗಿ ಸಾವು

ಮುಡಿಪು : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ ಸಂಭವಿಸಿದೆ. ಬಂಟ್ವಾಳ  ಕರೋಪಾಡಿ ನಿವಾಸಿ ಸಿದ್ದಿಖ್ 48)  ಮೃತಪಟ್ಟವರು. ಗಲ್ಫ್  ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು  ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಸದ್ಯ ದೇರಳಕಟ್ಟೆ ಫ್ಲಾಟ್ ನಲ್ಲಿ ನೆಲೆಸಿರುವ ಸಿದ್ದೀಖ್ ಶುಕ್ರವಾರದ ಜುಮಾ ನಮಾಝ್ ಅನ್ನು ಕರೋಪಾಡಿ ಮಸೀದಿಯಲ್ಲಿ ನಡೆಸಿದ್ದರು. ಅಲ್ಲಿಂದ ವಾಪಸ್ಸು ದೇರಳಕಟ್ಟೆಗೆ ಬರುವ

ಪ್ರಧಾನಿ ಮೋದಿಯವರಿಂದ ಸೇಲಾ ಸುರಂಗ ಉದ್ಘಾಟನೆ

ಪ್ರಧಾನಿ ಮೋದಿಯವರು ಅರುಣಾಚಲ ಪ್ರದೇಶದಲ್ಲಿ ಸುರಂಗ ಮಾರ್ಗ ಉದ್ಘಾಟಿಸಿದರು. ಈ ಸುರಂಗ ಮಾರ್ಗವು ಗಡಿ ಉದ್ದಕ್ಕೂ ಹಬ್ಬುವ ರಸ್ತಗೆ ಪ್ರಮುಖ ಸಂಪರ್ಕವಾಗಿದೆ. ಅರ್ಧ ಕಿಲೋಮೀಟರಿಗಿಂತಲೂ ಚಿಕ್ಕದಾದರೂ ಈ ಸುರಂಗವು ಚೀನಾದ ಗಡಿಯ ಆ ಕಡೆಯ ರಸ್ತೆಗೆ ಸಮಾನಾಂತರ ರಸ್ತೆ ಜಾಲ ಹೊಂದುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾದ ಗಡಿಯ ಹತೋಟಿ ರೇಖೆಯು 3,488 ಕಿಲೋಮೀಟರ್ ಇದ್ದು, ಅರುಣಾಚಲ ಪ್ರದೇಶದ ಗಡಿ ತುಂಬ ಸೂಕ್ಷ್ಮ ಪ್ರದೇಶವೆನಿಸಿದೆ.

ಪದ್ಮಜಾ ಬಿಜೆಪಿಗೆ ವಲಸೆ : ಮುರಳೀಧರನ್‌ಗೆ ಟಿಕೆಟ್

ಕೇರಳದ ಮುಖ್ಯಮಂತ್ರಿಯಾಗಿದ್ದ ಎ. ಕೆ. ಕರುಣಾಕರ್ ಮಕ್ಕಳು ಎರಡು ದಾರಿ ಹಿಡಿದಿದ್ದರೂ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳದೆ ಮುರಳೀಧರನ್‌ರಿಗೆ ಟಿಕೆಟ್ ನೀಡಿದೆ. ಮರಳೀಧರನ್‌ರು ಸದ್ಯ ವಡಕ್ಕರ ಸಂಸದರು. ಆದರೆ ಅವರಿಗೆ ಈಗ ತ್ರಿಶೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ತ್ರಿಶೂರು ಕರುಣಾಕರನ್‌ರ ಮೂಲ ನೆಲೆ. ಪದ್ಮಜಾರು ಬಿಜೆಪಿಗೆ ಸೇರಿರುವುದರಿಂದ ಮುರಳೀಧರನ್‌ರಿಗೆ ಕ್ಷೇತ್ರ ಬದಲಿಸಿ ಟಿಕೆಟ್ ನೀಡಲಾಗಿದೆ. ತ್ರಿಶೂರ್‌ನಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಕರುಣಾಕರನ್ 

ಮೂಡುಬಿದಿರೆ :ಮಿಥುನ್ ರೈ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಹಾನಿ

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆಯಲಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಮೂಡುಬಿದಿರೆ ಪರಿಸರದಲ್ಲಿ ಹಾಕಿರುವ ಫ್ಲೆಕ್ಸ್‌ಗಳನ್ನು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದಲ್ಲದೆ ಮಿಥುನ್ ರೈ ಪೋಟೋಕೆ ಹಾನಿ ಮಾಡಿದ್ದಾರೆ.   ಈ ಬಗ್ಗೆ  ಕಾಂಗ್ರೆಸ್ ಮುಖಂಡರು ಮೂಡುಬಿದಿರೆ  ಠಾಣೆಗೆ ದೂರು ನೀಡಿ  ಫ್ಲೆಕ್ಸ್

ಮಂಗಳೂರು: ಮಾ.11ರಂದು ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆ ಶುಭಾರಂಭ

ಮಂಗಳೂರಿನ ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಮತ್ತೊಂದು ಶಾಖೆಯು ಮಾರ್ಚ್ 11ರಂದು ಶುಭಾರಂಭಗೊಳ್ಳಲಿದೆ. ಈಗಾಗಲೇ ಖ್ಯಾತಿಯನ್ನು ಪಡೆದಿರುವ ಕಾಮಾಕ್ಷಿ ವೇಂಚರ್ಸ್‌ನ ಅಪ್ಸರಾ ಐಸ್‌ಕ್ರೀಂ ಐಸ್‌ಕ್ರೀಂ ಪ್ರೀಯರ ನೆಚ್ಚಿನ ಶಾಖೆಯಾಗಿದೆ. ವಿವಿಧ ಫ್ಲೇವರ್‌ಗಳ ಟೇಸ್ಟಿ ಐಸ್‌ಕ್ರೀಂಗಳಿಗೆ ಜನಪ್ರಸಿದ್ಧಿಯನ್ನು ಪಡೆದಿದೆ. ಇದೀಗ ನಗರದ ಮಣ್ಣಗುಡ್ಡದ ಲೋಟಸ್ ದಾಮ್‌ನ ನೆಲಮಹಡಿಯಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆಯು ಮಾರ್ಚ್ 11ರಂದು ಬೆಳಿಗ್ಗೆ 11 ಗಂಟೆಗೆ

ಬಾರಕೂರು  : ಆಳುಪೋತ್ಸವ ನಡೆದಲ್ಲಿ ಕಾಡು ಪೊದೆಗಳ ರಾಜ್ಯ

ತುಳುನಾಡ ರಾಜಧಾನಿ ಆಗಿದ್ದ ದೇವಾಲಯಗಳ, ರಾಜ ಮಹಾರಾಜರುಗಳ  ಖ್ಯಾತಿಯ  ಬಾರಕೂರು  ಕೋಟೆಯಲ್ಲಿ 5 ವರ್ಷಗಳ ಹಿಂದೆ  ನಡೆದ ಅಳುಪೋತ್ಸವ ನಡೆದಿತ್ತು. ಅಲ್ಲಿ ಈಗ ಮುಳ್ಳು ಪೊದೆಗಳು ರಾಜ್ಯಭಾರ ನಡೆಸಿವೆ.  2019 ಜನವರಿ  25ರಿಂದ 27ರತನಕ  ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ  ಮತ್ತು  ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಡಳಿತ  ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದಲ್ಲಿ  ನಡೆದ ಅಳುಪೋತ್ಸವ  ಬಾರಕೂರಿನ  ಗತ ವೈಭವಕ್ಕೆ  ಸಾಕ್ಷಿಯಾಗಿತ್ತು. ಕೋಟೆಯ ಸುತ್ತ ಏರು

370ನೇ ವಿಧಿ ರದ್ದನ್ನು ಕರಾಳ ದಿನ ಎಂದದ್ದು ತಪ್ಪಲ್ಲ: ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ: ಸುಪ್ರೀಂ

ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ಕರಾಳ ದಿನ ಎಂದು ಕರೆದದ್ದು ತಪ್ಪಲ್ಲ. ಅದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸರ್ವೋಚ್ಚ  ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಸರಕಾರದ ಕ್ರಮಗಳನ್ನು ಟೀಕಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಪ್ರಜೆಗೆ ಇದೆ ಎಂದೂ ಅದು ಹೇಳಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಸಹ ಸುಪ್ರೀಂ ಕೋರ್ಟು ಹೇಳಿದೆ. ಪಾಕಿಸ್ತಾನಕ್ಕೆ ಯಾರಾದರೂ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದರೆ ಅದು ಅಪರಾಧ ಆಗುವುದಿಲ್ಲ. ಅದು ಸ್ನೇಹ ಸೂಚಕ

ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ

ಉತ್ತರ ಕರ್ನಾಟಕ ಮೂಲದ ಬೆಂಗಳೂರು ನಿವಾಸಿ ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಸುಧಾ ಮೂರ್ತಿಯವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಬಗೆಗೆ ಪ್ರಧಾನಿ ಮೋದಿಯವರು ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿ, ರಾಷ್ಟ್ರಪತಿಯವರು ತಮ್ಮನ್ನು ನೇಮಿಸಿರುವುದು ಆನಂದ ತಂದಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಮ ನಿರ್ದೇಶನ ಮಾಡಿದ್ದಾರೆ. ಇದರಿಂದ ನಾರೀ ಶಕ್ತಿಗೆ ಬಲ ಬಂದಂತಾಗಿದೆ ಎಂದೂ ಹೇಳಲಾಗಿದೆ.