ಧರ್ಮಸ್ಥಳದಲ್ಲಿ ಉಚಿತ ಸೌರ ವಿದ್ಯುತ್ ಘಟಕಕ್ಕೆ ಚಾಲನೆ

2011ನೇ ಇಸವಿಯಲ್ಲಿ ಇಡೀ ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಸುಮಾರು ಮೂರು ಲಕ್ಷ ಮನೆಗಳಿಗೆ ಸೋಲಾರ್ ದೀಪಗಳ ವ್ಯವಸ್ಥೆ ಮಾಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಧರ್ಮಸ್ಥಳದ ಅನ್ನಪೂರ್ಣ ಚಿತ್ರದಲ್ಲಿ ಸುಮಾರು ೫೦ ಲಕ್ಷ ವ್ಯತ್ಯಾಸದ ಸೆಲ್ಕ್ಕೋ ಫೌಂಡೇಶನ್ ಪ್ರಾಯೋಜತ್ವದಲ್ಲಿ ಅಳವಡಿಸಲಾದ ಉಚಿತ ಸೌರ ವಿದ್ಯುತ್ ಘಟಕದ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಲಾರ್ ಆಳವಡಿಕೆಯಲ್ಲಿ ಶ್ರೀ ಕ್ಷೇತ್ರಕ್ಕೆ ಲಂಡನ್ನಿಂದ ಪ್ರಶಸ್ತಿ ಕೂಡ ಲಭಿಸಿದೆ. ಈಗ ಸೆಲ್ಕೋ ಸೋಲಾರ್ ನವರು ಉಚಿತವಾಗಿ ಅನ್ನಪೂರ್ಣ ಛತ್ರಕ್ಕೆ ನೀಡಿದ್ದಾರೆ. ಶ್ರೀ ಕ್ಷೇತ್ರಕ್ಕೆ ವಿಶೇಷವಾಗಿ ಅಭಿಮಾನವಿಟ್ಟು ಸಹಕರಿಸಿದ ಸೆಲ್ಕೋ ಸೋಲಾರ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ ಹರ್ಷೇಂದ್ರ ಕುಮಾರ್ ಹಾಗೂ ಸೋಲಾರ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

add - tandoor .

Related Posts

Leave a Reply

Your email address will not be published.