ಫುಟ್ಬಾಲ್ ದಂತಕತೆ ಡಿಗೊ ಮರಡೋನರ ಹ್ಯಾಂಡ್ ಆಫ್ ಗಾಡ್ : ಮಂಗಳೂರಿಗೆ ಆಗಮಿಸಿದ್ದ ಚಿನ್ನದ ಮೂರ್ತಿ

ಮಾದಕದ್ರವ್ಯ ವಿರುದ್ಧ ನಡೆಸುವ ಹೋರಾಟಕ್ಕಾಗಿ ಡಾ. ಬೋಬಿ ಚೆಮ್ಮನ್ನೂರು ನೇತೃತ್ವದಲ್ಲಿ ಖತರ್‍ಗೆ ಕೊಂಡೊಯ್ಯಲಾಗುವ ಫುಟ್ಬಾಲ್ ದಂತಕತೆ ಡಿಗೊ ಮರಡೋನ ಅವರ ಹ್ಯಾಂಡ್ ಆಫ್ ಗಾಡ್ ಚಿನ್ನದ ಮೂರ್ತಿಯನ್ನು ನಗರದ ಮೈದಾನಕ್ಕೆ ತರಲಾಯಿತು.

ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯದ ವಿರುದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ದಕ್ಷಿಣ ಕನ್ನಡ ಫುಟ್ಪಾಲ್ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಚಿತ್ರನಟ ಅರ್ಜುನ್ ಕಾಪಿಕಾಡ್, ಕಾರ್ಪೋರೇಟರ್ ಲತೀಫ್ ಕಂದಕ್ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ, ಹುಸೇನ್ ಬೋಳಾರ್, ಮೋಹನ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು. ಇನು ಈ ಮೂರ್ತಿಯನ್ನು ಸಂತ ಅಲೋಶಿಯಸ್ ಕಾಲೇಜಿಗೆ ಕೊಂಡೊಯ್ಯಲಾಗುತ್ತಿದೆ. ಬಳಿಕ ಮಣಿಪಾಲ, ಭಟ್ಕಳ ಮೂಲಕ ಗೋವಾಕ್ಕೆ ತೆರಳಲಿದೆ.

Related Posts

Leave a Reply

Your email address will not be published.