ಕಾರ್ಕಳದ ಮಿಯಾರು ಗ್ರಾಮದಲ್ಲಿ ಕೈಗಾರಿಕೆ ಸ್ಥಾಪನೆಗೆ ವಿರೋಧ

ಕಾರ್ಕಳದ ಮಿಯಾರು ಗ್ರಾಮದಲ್ಲಿ ಜಾನ್ ಸಿಎನ್ ಎಸ್‍ಎಲ್ ಆಯಿಲ್ ಮತ್ತು ಶೆಲ್ ಘಟಕ ಪ್ರಾರಂಭಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಶೇಕ್ ಶಬ್ಬೀರ್ ಅವರು, ಕೈಗಾರಿಕಾ ಪ್ರದೇಶ ಸ್ಥಾಪಿಸಲು ಯೋಗ್ಯವಲ್ಲದ ಸ್ಥಳ ಇದಾಗಿದೆ. ಕೈಗಾರಿಕೆ ಪ್ರಾಂಗಾಣಕ್ಕೆ ಹೊಂದಿಕೊಂಡು ಸುಮಾರು 450 ಹೆಚ್ಚು ಬಡ ಕುಟುಂಬಗಳ ಗುಡಿಸಲುಗಳಿವೆ. ಕೂಗಳತೆಯ ದೂರದಲ್ಲಿ ಮುರಾಜಿ ದೇಸಾಯಿ ವಸತಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಇದೆ. ಈ ಕಾರ್ಖಾನೆಯಿಂದ ದಟ್ಟವಾದ ಹೋಗೆ ಮತ್ತು ದುರ್ವಾಸನೆ ಹರಡಿ ಪರಿಸರಕ್ಕೆ ಹಾಗೂ ಜನಜೀವನಕ್ಕೆ ತೊಂದರೆಯಾಗಬಹುದು. ಜನರು ಮಾರಕ ರೋಗಕ್ಕೆ ಗುರಿಯಾಗುವ ಸಂಭವ ಇರುವುದರಿಂದ ಈ ಕಾರ್ಖಾನೆ ಸ್ಥಾಪನೆಗೆ ನಮ್ಮೆಲ್ಲರ ವಿರೋಧವಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಮಂಜುನಾಥ ನಾಯಕ್, ಅಧ್ಯಕ್ಷರು ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಜೊತೆ ಕಾರ್ಯದರ್ಶಿ ಗಣೇಶ್ ಕುಮಾರ್, ರಾಜೇಶ್ ದೇವಾಡಿಗ, ಸದಸ್ಯರಾದ ರವಿ ಹೆಗಡೆ, ಪೂಜಾರಿ ಉಪಸ್ಥಿತರಿದ್ದರು.
