ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಭಜನಾ ಸಪ್ತಾಹ

ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಆಗಸ್ಟ್ 2 ರಿಂದ ಆಗಸ್ಟ್ 9 ರವರೆಗೆ, 122 ನೇ ಭಜನಾ ಸಪ್ತಾಹ ಮಹೋತ್ಸವವು, ನಾಗರ ಪಂಚಮಿಯಂದು ಶುಭಾರಂಭಗೊಂಡು, ದ್ವಾದಶಿ ಪರ್ಯಂತ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಊರ ಪರವೂರ ಭಜನಾ ಮಂಡಳಿಗಳಿಂದ ಅಹೋರಾತ್ರಿ 7 ದಿನಗಳ ಕಾಲ, ನಿರಂತರ ಭಜನೆ ಈ ಮಹೋತ್ಸವದಲ್ಲಿ ನಡೆಯಲಿದೆ. ಈ ಪ್ರಯುಕ್ತ ನಡೆದ ದೀಪ ಸ್ಥಾಪನಾ ಕಾರ್ಯಕ್ರಮ ವೈಭವದಿಂದ ನೆರವೇರಿತು.

ಈ ಶುಭ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಜಿಎಸ್‍ಬಿ ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದು, ವಿ4 ನ್ಯೂಸ್‍ನೊಂದಿಗೆ ಮಾತನಾಡಿದ ದೇಗುಲದ ಆಡಳಿತ ಮೊಕ್ತೇಸರಾದ ಪಿ. ವಿ. ಶೈಣೈ ಯವರು, ಹಿರಿಯರು ನಡೆಸಿಕೊಂಡು ಬಂದತಹ, ಈ ಸಪ್ತಾಹ ಕಾರ್ಯಕ್ರಮದ ಧಾರ್ಮಿಕ ಆಚರಣೆಯ ವೈಶಿಷ್ಟ್ಯತೆಯ ಕುರಿತು ಮಾಹಿತಿ ನೀಡಿದರು.
ಭಜನಾ ಸಪ್ತಾಹ ಮಹೋತ್ಸವದಲ್ಲಿ ನಿರಂತರ ಭಜನೆ ಮಾಡುವುದರ ಮಹತ್ವವನ್ನು, ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ್ ಭಟ್‍ರವರು ತಿಳಿಸಿದರು.

ಭಜನಾ ಸಪ್ತಾಹ ಮಹೋತ್ಸವದಲ್ಲಿ, ರಾತ್ರಿ ಪೂಜೆ, ರಂಗ ಪೂಜೆ, ಕಾಕಡಾರತಿ, ನಗರ ಭಜನೆ, ಮಂಗಲೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Related Posts

Leave a Reply

Your email address will not be published.