ಕಾರ್ಕಳ : ವಿಶ್ವ ಹೃದಯ ದಿನಾಚರಣೆ, ಹೃದಯಕ್ಕಾಗಿ ನಡಿಗೆ ,ಓಟ

ಕಾರ್ಕಳ ರೋಟರಿ ಕ್ಲಬ್ ರಾಕ್ ಸಿಟಿ ಡಾ. ಟಿಎಂಎ. ಆಸ್ಪತ್ರೆ ಕಾರ್ಕಳ ಇವರ ಆಶ್ರಯದಲ್ಲಿ ವಿಶ್ವ ಹೃದಯ ಆರೋಗ್ಯ ದಿನದ ಅಂಗವಾಗಿ ನೂರಾರು ಶಾಲಾ ವಿದ್ಯಾರ್ಥಿಗಳು ಹಲವಾರು ಸಂಘಟನೆಗಳು ಅನಂತಶಯನ ವೃತ್ತದಿಂದ ಕಾರ್ಕಳ ಬಂಡಿ ಮಠ ಬಸು ನಿಲ್ದಾಣದವರೆಗೆ ಹೃದಯಕ್ಕಾಗಿ ನಡಿಗೆ ಓಟವನ್ನು ಆಯೋಜಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾತನಾಡಿದ ಡಾ. ಭರತೇಶ್ ವಿಶ್ವದಾದ್ಯಂತ ವಿಶ್ವ ಹೃದಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಜಗತ್ತಿನಲ್ಲಿ 18 ಮಿಲಿಯ ಜನರು ಹೃದಯ ರೋಗದಿಂದ ಸಾಯುತ್ತಿದ್ದಾರೆ ಅದರಲ್ಲಿ ವಿಶೇಷವಾಗಿ ಏಷ್ಯಾ ಖಂಡದಲ್ಲಿ 30 ವರ್ಷದ ಒಳಗಿನವರು ಹೃದಯದ ಕಾಯಿಲೆಗೆ ಒಳಗಾಗಿ ಸಾವನಪ್ಪುತ್ತಿರುವುದು ದುಃಖದ ವಿಚಾರ ಎಂದರು.

ಉದ್ಘಾಟನಾ ಭಾಷಣ ಮಾಡಿದ ಡಾ. ಟಿ ಎಮ್ ಎ ಫೈ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಕೀರ್ತಿನಾಥ್ ಬಳ್ಳಾಲ್ ಅವರು, ನಾವಿಂದು ನಡೆಯುವುದನ್ನು ಪ್ರಾರಂಭಿಸಿದ್ದೇವೆ. ನಡಿಗೆ ಹೃದಯಕ್ಕೆ ಒಳ್ಳೆಯ ವ್ಯಾಯಾಮವಾಗಿದೆ. ಇದನ್ನು ನಾವು ಜೀವನದಲ್ಲಿ ಮುಂದುವರಿಸಬೇಕೆಂದು ಹೇಳಿದರು. ನಂತರ ಮಾತನಾಡಿದ ಹಿರಿಯ ವೈದ್ಯ ಡಾ. ಆನಂದ ನಾಯಕ್ ನಮ್ಮಲ್ಲಿ ಹೃದಯ ಸಂಬಂಧ ಕಾಯಿಲೆಗಳು ಚಿಕ್ಕ ಮಕ್ಕಳಲ್ಲಿ ಬಹಳಷ್ಟು ಕಾಣುತ್ತೇವೆ. ನಾವು ಇತರ ಕಾಯಿಲೆಗಳಿಂದ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಮಾಕೇಶವ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.