ಮಳೆಗೆ ಸಂಪೂರ್ಣವಾಗಿ ಹದಗೆಟ್ಟ ಮುಖ್ಯರಸ್ತೆ : ಚರಂಡಿ ಮೋರಿಗಳಿಗೆ ಕೋಟ್ಯಾಂತರ ರೂಪಾಯಿ ಖರ್ಚು

ಕಾರ್ಕಳ : ಕಳೆದ ಮಾರ್ಚ್ ತಿಂಗಳಲ್ಲಿ ಕಾರ್ಕಳದಲ್ಲಿ ಬಹಳ ಅದ್ದೂರಿಯಾಗಿ ಕಾರ್ಕಳ ಉತ್ಸವ ಜರುಗಿದ್ದು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಮುಖ್ಯ ರಸ್ತೆಗಳು, ಚರಂಡಿ ಮೋರಿಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಡಾಮರೀಕರ್ಣ ಮಾಡಲಾಗಿತ್ತು. ಇದೀಗ ಕಾರ್ಕಳದ ಮುಖ್ಯ ರಸ್ತೆಗಳಲ್ಲಿ ಒಳ ಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕಾರ್ಕಳ ಮುಖ್ಯ ರಸ್ತೆಯ ಡಾಮರು ಎದ್ದು ಹೊಂಡಗಳು ಬಿದ್ದು ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಹೋಗುವುದೇ ಒಂದು ಸಮಸ್ಯೆಯಾಗಿದೆ. ಈಗ ಕಾಣುತ್ತಿರುವ ರಸ್ತೆ ಆನೆಕೆರೆಯಿಂದ ಕಾರ್ಕಳ ಮುಖ್ಯಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆಯಾಗಿದೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಈ ರಸ್ತೆ ಸ್ಥಿತಿ ಈ ರೀತಿ ಉಂಟಾಗಿದೆ. ಕಾರ್ಕಳದ ಬಹುತೇಕ ರಸ್ತೆ ರಸ್ತೆಗಳ ಸ್ಥಿತಿ ಇದೆ ರೀತಿ ಬಾಯಿ ತೆರೆದು ಮನುಷ್ಯನ ಅಮೂಲ್ಯ ಜೀವ ತೆಗೆದುಕೊಳ್ಳಲು ಕಾಯುತ್ತಿವೆ. ಇಷ್ಟಾದರೂ ನಮ್ಮ ಜನನಾಯಕನಾಗಲಿ, ಪುರಸಭೆ ಆಗಲಿ ಯಾವುದೇ ಪರಿವೆ ಇಲ್ಲದೆ ವರ್ತಿಸುವುದು ಜನಸಾಮಾನ್ಯರಿಗೆ ಒಂದು ಯಕ್ಷ ಪ್ರಶ್ನೆಯಾಗಿದೆ.