ಶ್ರೇಷ್ಠ ಗಾಯಕರ ಸ್ವರ ಅನುಕರಣೆಯೊಂದಿಗೆ ಪ್ರಸಿದ್ಧಿ ಪಡೆದ ಶಾಲಿ

ಮಂಜೇಶ್ವರ: ಸಂಗೀತದಿಂದ ಶಾಂತಿ ಸಾಮರಸ್ಯ ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿರುವ ಕೇರಳ ಕರ್ನಾಟಕ ಗಡಿ ಪ್ರದೇಶಗಳಲ್ಲಿ ತನ್ನ ಇಂಪಾದ ಮಧುರವಾದ ಕಂಠದಿಂದ ಇಲ್ಲೊಬ್ಬ ಕಲಾವಿದರೊಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತಿದ್ದಾರೆ. ತನ್ನ ಇಂಪಾದ ಹಾಡುಗಳಿಂದ ಹಲವು ವೇದಿಕೆಗಳಲ್ಲಿ ಗುರುತಿಸಿಕೊಂಡಿರುವ ಈ ಕಲಾವಿದ ನೊಂದವರ ಪಾಲಿಗೂ ಆಶಾ ಕಿರಣವಾಗಿ ಚ್ಯಾರಿಟೇಬಲ್ ವತಿಯಿಂದ ನಡೆಸುವ ವೇದಿಕೆಗಳಲ್ಲೂ ಜನ ಮನ ಗೆದ್ದಿದ್ದಾರೆ.

ಮಂಗಳೂರು ನಿವಾಸಿಯಾಗಿರುವ ಶಾಲಿ ಮಂಗಳೂರು ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿರುವ ಇವರು ಗಡಿ ನಾಡ ಪ್ರದೇಶವಾದ ಮಂಜೇಶ್ವರ ‘ ಉಪ್ಪಳ, ಕುಂಬ್ಳೆ, ಕಾಸರಗೋಡು ಹಾಗೂ ಮಂಗಳೂರಿನ ಹಲವು ವೇದಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಇವರು 1989 ರಿಂದ ಬಾಲಿವುಡ್ ನಲ್ಲಿ ಸದ್ದು ಮಾಡಿರುವ ಶ್ರೇಷ್ಠ ಗಾಯಕರಾಗಿರುವ ಮೊಹಮ್ಮದ್ ರಫಿ, ಶಬೀರ್ ಕುಮಾರ್, ಉದಿತ್ ನಾರಾಯಣ್, ಮೊಹಮ್ಮದ್ ಅಝೀಝ್, ಮುಕೇಶ್, ಕಿಶೋರ್ ಮೊದಲಾದವರ ಅನುಕರಣೆಯೊಂದಿಗೆ ತನ್ನ ಮಧುರ ಕಂಠದಿಂದ ಎಲ್ಲರನ್ನು ರಂಜಿಸುತಿದ್ದಾರೆ.

ಗಡಿನಾಡ ಪ್ರದೇಶದಲ್ಲಿ ಇವರ ಹಾಡು ಭಾರೀ ವೈರಲಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲಿಂದೆಲ್ಲಿಗೆಲ್ಲಾ ಶೇರ್ ಆಗುತ್ತಿದೆ. ಜ್ಯೂನಿಯರ್ ಮೊಹಮ್ಮದ್ ರಫಿ ಎಂಬ ಉಪನಾಮೆಯಿಂದ ಪ್ರಖ್ಯಾತರಾಗಿರುವ ಇವರ ಕಲೆಯನ್ನು ಗುರುತಿಸಿ ಹಲವು ಸಂಘಟನೆಗಳು ಶಾಲಿ ಮಂಗಳೂರು ರವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡ ಶಾಲಿ ಮಂಗಳೂರು ರವರು ಸೋಲಿಲ್ಲದ ಸರದಾರನೆಂಬ ಬಿರುದನ್ನು ತನ್ನದಾಗಿಸಿರುವ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕರಾಗಿರುವ ಯು ಟಿ ಖಾದರ್ ರವರ ಜೊತೆಯಾಗಿ ಪ್ರನೀತ್ ರಾಜ್ ಕುಮಾರ್ ರವರ ಬೊಂಬೆ ಹಾಡುತೈತೆ ಎಂಬ ಹಾಡನ್ನು ಹಾಡಿರುವುದು ಈಗ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗಿದೆ.

Related Posts

Leave a Reply

Your email address will not be published.