ಮಂಜೇಶ್ವರದಲ್ಲಿ ಸಂಭ್ರಮದ ಬೀಚ್ ಪೆಸ್ಟ್ ಗೆ ಚಾಲನೆ

ಮಂಜೇಶ್ವರ: ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ನಲ್ಲಿ ಸಂಭ್ರಮದ ಬೀಚ್ ಫೆಸ್ಟ್ ಗೆ ಚಾಲನೆ ದೊರಕಿತು. ಇನ್ನು ಮುಂದಿನ ಒಂದು ತಿಂಗಳಿನಲ್ಲಿ ನಡೆಯಲಿರುವ ಬೀಚ್ ಫೆಸ್ಟ್ ಮಂಜೇಶ್ವರದ ಬೀಚ್‍ನಲ್ಲಿ ಉತ್ಸವದ ಸಂಭ್ರಮವಾಗಲಿದೆ.

ಈ ಸಲದ ಮಂಜೇಶ್ವರ ಕಂಡು ಕೊಳಕೆ ಬೀಚ್ ಫೆಸ್ಟ್ ವಿವಿಧ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ರೀತಿಯ ಮನರಂಜನೆ ಲಭಿಸಲಿದೆ. ಬೀಚ್ ಫೆಸ್ಟ್ ಗೆ ಮಂಜೇಶ್ವರದ ನಾನಾ ಭಾಗಗಳಿಂದ ಜನ ಸಾಗರವೇ ಹರಿದು ಬರುತಿದ್ದು, ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಂಜೇಶ್ವರ ದ ಜನತೆಗೆ ಈ ಒಂದು ಬೀಚ್ ಉತ್ಸವ ಒಂದು ವರದಾನವಾಗಿ ಪರಿಣಮಿಸಿದೆ.ಉತ್ತಮ ಗುಣಮಟ್ಟದ ಉತ್ಪನ್ನ ಹಾಗೂ ವಿವಿಧ ರೀತಿಯ ಮನ ರಂಜನೆಗಳನ್ನು ಸವಿಯಲು ದೂರ ದೂರ ಪ್ರದೇಶಗಳಿಂದಲೂ ಜನರು ಇಲ್ಲಿಗೆ ಆಗಮಿಸುತ್ತಿರುವುದು ವಿಶೇಷವಾಗಿದೆ. ವಾರದ ಕೊನೆ ದಿನಗಳಲ್ಲಿ ವೀಕ್ಷಕರನ್ನು ನಿಯಂತ್ರಿಸಲು ಅಸಾಧ್ಯವಾಗುವ ರೀತಿಯಲ್ಲಿ ಇಲ್ಲಿಯ ಮನರಂಜನೆಯನ್ನು ಸವಿಯಲು ಜನರು ಆಗಮಿಸುತಿದ್ದಾರೆ.

ಉತ್ಸವದಲ್ಲಿ ಅಳವಡಿಸಲಾಗಿರುವ ಜಾಂಟ್ ವೀಲ್, ಕೊಲಂಬಸ್, ಬ್ರೇಕ್ ಡ್ಯಾನ್ಸ್ , ಡ್ರಾಗನ್ ಟ್ರೈನ್, ಮಕ್ಕಳ ಹೆಲಿಕಾಪ್ಟರ್, ಸ್ಕಾರ್ಪಿಯೋ, ಜಂಪಿಂಗ್, ಬೋನ್ಸೇ , ಚಿಕ್ಕ ಮಕ್ಕಳ ಟ್ರೈನ್, ಬೋಟಿಂಗ್ ಸೇರಿದಂತೆ ಕಾಸರಗೋಡು ಮಂಗಳೂರು ನಗರಗಳಲ್ಲಿ ಪ್ರದರ್ಶನ ಕೊಂಡದ್ದಕ್ಕಿಂತ ಭಿನ್ನವಾದ ರೀತಿಯಲ್ಲಿ ವಿವಿಧ ಮನರಂಜನೆಗಳು ಆಗಮಿಸುವ ಜನತೆಯನ್ನು ಕೈ ಮಾಡಿ ಕರೆಯುತ್ತಿದೆ.ಇದರ ಜೊತೆಯಾಗಿ ವಿವಿಧ ರೀತಿಯ ಪುಡ್ ಗಳು, ವಿವಿಧ ರೀತಿಯ ಹೂವಿನ ಗಿಡಗಳು ಬೀಚ್ ಫೆಸ್ಟ್ ಗೆ ಆಗಮಿಸುವ ಜನತೆಗೆ ಆಕರ್ಷಕವಾಗುತ್ತಿದೆ.

ಕುಂಡು ಕೊಳಕೆ ಬೀಚ್ ಫೆಸ್ಟನ್ನು ಮಂಜೇಶ್ವರದ ಜನಪ್ರಿಯ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಜೇಶ್ವರದಲ್ಲಿ ಪ್ರಕೃತಿ ಅನುಗ್ರಹಿಸಿದ ರಮಣೀಯ ದೃಶ್ಯಗಳು ಹಲವಾರು ಇದೆ. ಕೆಲವೊಂದು ಸಿನಿಮಾಗಳ ಚಿತ್ರೀಕರಣ ಕೂಡಾ ಮಂಜೇಶ್ವರದ ಹಲವೆಡೆಗಳಲ್ಲಾಗಿ ನಡೆಯುತ್ತಿದೆ. ಅದೇ ರೀತಿ ಇದೀಗ ದೊಡ್ಡ ದೊಡ್ಡ ನಗರಗಳ ಕರಾವಳಿ ಪ್ರದೇಶಗಳಲ್ಲಿ ನಡೆಯಿತಿದ್ದ ಬೀಚ್ ಉತ್ಸವವನ್ನು ಕೂಡಾ ನಮ್ಮ ಊರಲ್ಲೇ ನಮಗೆ ಸವಿಯಬಹುದಾದ ಅವಕಾಶ ಲಭಿಸಿದೆ ಇಂತಹ ಉತ್ಸವವನ್ನು ಆಯೋಜಿಸುವವರನ್ನು ನಾವು ಪೆÇ್ರೀತ್ಸಾಹಿಸಬೇಕಾಗಿದೆ ಎಂದು ಹೇಳಿ ಬೀಚ್ ಉತ್ಸವಕ್ಕೆ ಶುಭ ಹಾರೈಸಿದರು.

ಬಳಿಕ ವಾರ್ಡ್ ಸದಸ್ಯ ಅಬ್ದುಲ್ ರಹಿಂ ರವರು ಮಾತನಾಡಿ ಈ ಫೆಸ್ಟ್ ಮಂಜೇಶ್ವರದ ಜನತೆಗೊಂದು ಕೊಡುಗೆಯಾಗಿದೆ. ಉದ್ಯಾವರದ ಎ ಎಚ್ ಎಸ್ ಗ್ರೂಪ್ ನ ಗೆಳೆಯರು ಮಂಜೇಶ್ವರದ ಇತಿಹಾಸದಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿದ್ದಾರೆ. ನಮ್ಮ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಲು ನಾವು ಇಂತವರಿಗೆ ಸಹಕಾರ ನೀಡಬೇಕಾಗಿದೆ ಎಂದು ಹೇಳಿ ಬೀಚ್ ಫೆಸ್ಟ್ ಗೆ ಶುಭವನ್ನು ಹಾರೈಸಿದರು.

ಬಳಿಕ ಬೀಚ್ ಫೆಸ್ಟ್ ವೀಕ್ಷಿಸಲು ಆಗಮಿಸಿದ ರಿಯಾಝ್ ಹುಸೈನ್ ರವರು ಮಾತನಾಡಿ ನಾಡಿನ ಅಭಿವೃದ್ಧಿಗೆ ಬೀಚ್ ಉತ್ಸವದಂತಹ ಮಾದರಿ ಸೇವೆಗಳು ಅತೀ ಅಗತ್ಯ. ಇದನ್ನು ಆಯೋಜಿಸಿರುವ ಎ ಎಚ್ ಎಸ್ ನವರನ್ನು ಅಭಿನಂದಿಸಲೇ ಬೇಕಾಗಿದೆ. ಇದಕ್ಕೂ ಮೊದಲು ಇದೇ ಗ್ರೂಪ್ ಆಯೋಜಿಸಿರುವ ಹಲವು ಪ್ರದರ್ಶನಗಳು ಉತ್ತಮ ಫಲ ಕಂಡಿದೆ. ಇದೀಗ ಆಯೋಜಿಸಿರುವ ಬೀಚ್ ಉತ್ಸವ ಕೂಡಾ ವೀಕ್ಷಕರಿಗೆ ಉತ್ತಮ ಮೆರುಗನ್ನು ನೀಡುತ್ತಿರುವುದಾಗಿ ಹೇಳಿ ಶುಭ ಹಾರೈಸಿದರು.

ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪಂ. ಉಪಾದ್ಯಕ್ಷ ಮೊಹಮ್ಮದ್ ಸಿದ್ದೀಖ್, ಬ್ಲೋಕ್ ಪಂಚಾಯತು ಅಧ್ಯಕ್ಷೆ ಶಮೀನಾ ಟೀಚರ್, ಜನಪ್ರತಿನಿಧಿಗಳಾದ ಹಮೀದ್ ಹೊಸಂಗಡಿ, ಅಬ್ದುಲ್ ರಹೀಂ, ರೇಖಾ, ರಾಧಾ, ಕುಲ್ಸುಮ್ಮ, ಲಕ್ಷ್ಮಣ, ಸಿಪಿಐ ಹಿರಿಯ ನೇತಾರ ಬಿ ವಿ ರಾಜನ್, ಸಾಮಾಜಿಕ ಕಾರ್ಯಕರ್ತರಾದ ಜಬ್ಬಾರ್, ಹಸೈನಾರ್, ಉದ್ಯಮಿ ಅಲಿಕುಟ್ಟಿ, ಕುಂಞಮೋನು ಹಾಗೂ ಬೀಚ್ ಫೆಸ್ಟ್ ಆಯೋಜಕರಾದ ಎ ಎಚ್ ಎಸ್ ಗ್ರೂಪಿನ ಅಪೀಝ್, ಹನೀಫ್, ಶಾನವಾಝ್ ಹಾಗೂ ಆಸಿಫ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು.

ವಾರದ ಶನಿವಾರ ಹಾಗೂ ಅಧಿತ್ಯವಾರಗಳಲ್ಲಿ ನಿಯಂತ್ರಿಸಲು ಅಸಾಧ್ಯವಾಗುವ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ
ಪ್ರವೇಶ ದರ 10 ರೂ. ಕಲ್ಪಿಸಲಾಗಿದೆ. ಉಳಿದ ದಿನಗಳಲ್ಲಿ ಉಚಿತ ಪ್ರವೇಶವಾಗಿದೆ. ಅದೇ ರೀತಿ ಬಾನುವಾರದಂದು ಕುಟುಂಬದ ಹಿರಿಯ ಸದಸ್ಯರುಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದ್ದು ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

Related Posts

Leave a Reply

Your email address will not be published.