ಅನಧಿಕೃತ ಗ್ಯಾಸ್ ಗೋಡನ್ ತೆರವುಗೊಳಿಸಲು ನಿರ್ಲಕ್ಷ್ಯ : ಅಪಾಯದಂಚಿನಲ್ಲಿ ದಲಿತ ಕುಟುಂಬಗಳು

ಪಡುಬಿದ್ರಿ ಗ್ರಾಮದ ಪಾದೆಬೆಟ್ಟುವಿನಲ್ಲಿ ಬಹಳಷ್ಟು ವರ್ಷಗಳಿಂದ ಅನಧಿಕೃತವಾಗಿ ದಲಿತ ಕಾಲೊನಿಯಲ್ಲಿ ಸುತ್ತಲೂ ವಾಸದ ಮನೆಗಳಿರುವ ಪ್ರದೇಶದಲ್ಲಿ ಗ್ಯಾಸ್ ಗೋಡಾನ್ ಕಾರ್ಯಚರಿಸುತ್ತಿದ್ದರೂ ಈ ಬಗ್ಗೆ ಗ್ರಾ.ಪಂ. ಸಹಿತ ಸಂಬಂಧಿಸಿದ ಇಲಾಖಾಧಿಕಾರಿಗಳು ತೆರವುಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಿದು, ಅನಿವಾರ್ಯ ಸ್ಥಿತಿ ಒದಗಿ ಬಂದರೆ ನಾವೆಲ್ಲರೂ ಒಂದಾಗಿ ಅಪಾಯಕಾರಿ ಗೋಡನ್ ದ್ವಂಸಗೊಳಿಸುವುದಾಗಿ ದಲಿತ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಸಿದ್ದಾರೆ.

ಗೋಡಾನ್ ಪ್ರದೇಶದಿಂದ ಗ್ರಾ.ಪಂ. ವರಗೆ ಪ್ರತಿಭಟನಾ ಜಾಥ ನಡೆಸಿ ಗ್ರಾ.ಪಂ. ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು, ಈ ಅನದಿಕೃತ ಗ್ಯಾಸ್ ಗೋಡಾನ್ ನಿಂದಾಗಿ ದಲಿತ ಕುಟುಂಬಗಳು ಪ್ರಾಣ ಭಯದಿಂದ ಜೀವನ ನಡೆಸುವಂತ್ತಾಗಿದ್ದು ಈ ಬಗ್ಗೆ ಕಾಪು ಶಾಸಕ ಲಾಲಾಜಿ ಮೆಂಡನ್ ಗಮನಕ್ಕೆ ತಂದರೂ ಅವರು ಸ್ಪಂಧಿಸಿಲ್ಲ ಎಂಬುದಾಗಿ ಆರೋಪಿಸಿದ್ದಾರೆ. ಜಾಥದುದ್ದಕ್ಕೂ ಕಾಪು ಶಾಸಕರ ವಿರುದ್ಧ ಮತ್ತು ಪಡುಬಿದ್ರಿ ಗ್ರಾ.ಪಂ. ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ದಲಿತ ಪ್ರಮುಖರಾದ, ವಿಠಲ್ ಮಾಸ್ತರ್, ಕೀರ್ತಿ ಕಲ್ಲಟ್ಟೆ, ಸುರೇಶ್ ಪಾದೆಬೆಟ್ಟು ಮುಂತಾದವರಿದ್ದರು.
