ಪುತ್ತೂರು ನಗರಸಭೆ ಸದಸ್ಯ ನೇಣು ಬಿಗಿದು ಆತ್ಮಹತ್ಯೆ.

ಪುತ್ತೂರು: ನಗರಸಭಾ ಸದಸ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಸಾಲ್ಮರ ಸಮೀಪದ ಊರಮಾಲು ಎಂಬಲ್ಲಿ ಗುರುವಾರ ನಡೆದಿದೆ.

ಇಲ್ಲಿನ ನಿವಾಸಿ ಶಿವರಾಮ ಸಫಲ್ಯ(46) ಮೃತಪಟ್ಟ ವ್ಯಕ್ತಿ. ಅವರು ಪುತ್ತೂರು ನಗರಸಭೆಯ 1ನೆ ವಾರ್ಡಿನ ಸದಸ್ಯರಾಗಿದ್ದಾರೆ.
ಗುರುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅವರು ಮನೆಯ ಒಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅವರ ಪತ್ನಿಯು ಪತಿಯ ಮೊಬೈಲ್ ಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಅವರು ಕರೆಯನ್ನು ಸ್ವೀಕರಿಸಿಲ್ಲ ಎನ್ನಲಾಗಿದ್ದು, ಪಕ್ಕದ ಮನೆಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ತಿಳಿದುಬಂದಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ಮು ಅಗಲಿದ್ದಾರೆ. ಪುತ್ತೂರು ನಗರಠಾಣೆಯಲ್ಲಿ ದೂರು ದಾಖಲಾಗಿದೆ

Related Posts

Leave a Reply

Your email address will not be published.