ಮಂಜೇಶ್ವರ : ಸ್ಟಾರ್ಸ್ ಯೋಜನೆಯ ಭಾಗವಾಗಿ ಕಥೋತ್ಸವ 2023

ಬಹುಭಾಷಾ ಸಂಗಮ ಭೂಮಿಯಾದ ಮಂಜೇಶ್ವರ ದ ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರ ದಲ್ಲಿ ಸಮಗ್ರ ಶಿಕ್ಷಾ ಕಾಸರಗೋಡು ಬಿ ಅರ್ ಸಿ ಮಂಜೇಶ್ವರದ ಸಹಭಾಗಿತ್ವದಲ್ಲಿ ಸ್ಟಾರ್ಸ್ ಯೋಜನೆಯ ಭಾಗವಾಗಿ ಕಥೋತ್ಸವ 2023 ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಯವರು ವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ ರವರು ಇಂದಿನ ಕಾಲಘಟ್ಟದಲ್ಲಿ ಕಥೆಯ ಅಗತ್ಯದ ಬಗ್ಗೆ ಹೇಳುತ್ತ ಅಮೆ ಜಿಂಕೆ ಇಲಿ ಕಾಗೆಯ ನೀತಿ ಕಥೆಯನ್ನು ಆಕರ್ಷಕವಾಗಿ ಮನಮುಟ್ಟುವಂತೆ ಹೇಳಿ ಕಥೋತ್ಸವ ವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಎಸ್‍ಎಸ್‍ಕೆ ಯ ಡಿ ಪಿ ಓ ನಾರಾಯಣ ದೇಲಂಪಾಡಿ ಯವರು ಆಧುನಿಕ ಕಾಲದ ಆಮೆ ಮತ್ತು ಮೊಲದ ಕಥೆಯನ್ನು ಮಾರ್ಮಿಕವಾಗಿ ಮನಮುಟ್ಟುವಂತೆ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅತಿಥಿಗಳಾದ ಶಿಕ್ಷಣ ತಜ್ಞ ಯು. ಪುರುಷೋತ್ತಮ್ ದಾಸ್, ಬಿ ಅರ್ ಸಿ ಟ್ರೈನರ್ ಸುಮಾ ದೇವಿ , ನಿವೃತ್ತ ಶಿಕ್ಷಕಿ ಝೀನ ಮರಿಯಂ, ಎಸ್‍ಎಮ್‍ಸಿ ಚೇರ್ಮನ್ ಅಬ್ದುಲ್ ರಹಿಮಾನ್ ಎಮ್‍ಪಿಟಿಎ ಅಧ್ಯಕ್ಷೆ ಸುಮಯ್ಯ, ಮಂಜೇಶ್ವರ ಬಿಆರ್‍ಸಿ ಯ ಬಿ ಪಿ ಸಿ ವಿಜಯ ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಸುಕೇಶ ಎ ಮೊದಲಾದವರು ಕಥೆಯನ್ನು ಹೇಳಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು, ರಕ್ಷಕರು, ಅಜ್ಜಿಯಂದಿರು ,ಶಿಕ್ಷಕರು, ನಿವೃತ್ತ ಶಿಕ್ಷಕರು ವಿವಿಧ ತರದ ನೀತಿ ಕಥೆಗಳನ್ನು ಹೇಳುವುದರ ಮೂಲಕ ಕಥೋತ್ಸವ ಬಹಳ ಔಚಿತ್ಯಪೂರ್ಣವಾಗಿ ಜರಗಿತು. ಕಾರ್ಯ ಕ್ರಮದ ಆರಂಭದಲ್ಲಿ ಅಗಲಿದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು

Related Posts

Leave a Reply

Your email address will not be published.