ಮಂಜೇಶ್ವರ: ಪೋಲಿಸರ ಮೇಲೆ ಹಲ್ಲೆ-ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುರ್ ರಹ್ಮಾನ್ ಬಂಧನ
ಉಪ್ಪಳ ಹಿದಾಯತ್ ನಗರದಲ್ಲಿ ಪೋಲಿಸರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯನನ್ನು ಮಂಜೇಶ್ವರ ಪೋಲಿಸರು ಬಂಧಿಸಿದ್ದಾರೆ.
ಮುಸ್ಲಿಂ ಲೀಗ್ ಮುಖಂಡ, ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ, ಉಪ್ಪಳ ಹಿದಾಯತ್ ಬಜಾರ್‍ನ ಗೋಲ್ಡನ್ ಅಬ್ದುಲ್ ರಹಮಾನ್ ಬಂಧಿತ ಆರೋಪಿಯಾಗಿದ್ದಾನೆ.
ಉಪ್ಪಳ ಹಿದಾಯತ್ ನಗರದಲ್ಲಿ ಗಸ್ತಿನಲ್ಲಿದ್ದ ಪೋಲಿಸರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಹಲ್ಲೆಯಿಂದ ಸಬ್‍ಇನ್ಸ್‍ಪೆಕ್ಟರ್ ಪಿ. ಅನೂಪ್ ಸೇರಿದಂತೆ ಇಬ್ಬರು ಪೋಲಿಸರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೋಲಿಸರು ರಶೀದ್ ಮತ್ತು ಅಫ್ಜಲ್ ಎಂಬವರನ್ನು ಬಂಧಿಸಿದ್ದರು. ಹಲ್ಲೆಗೈದ ತಂಡದಲ್ಲಿ ಅಬ್ದುಲ್ ರಹಮಾನ್ ಕೂಡ ಇದ್ದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.