ಉಪ್ಪಳ : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ ಆಹಾರ ಸಾಮಾಗ್ರಿ ವಿತರಣೆ

ಮಂಜೇಶ್ವರ : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆಯ 57ನೇ ಸೇವಾ ಕಾರ್ಯದ ವತಿಯಿಂದ ಉಪ್ಪಳ ಸಮೀಪದ ಪೈವಳಿಕೆ ಲಾಲ್ಬಾಗ್ ಬೋಳಂಗಳ ನಿವಾಸಿ ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

ಕಲ್ಯಾಣಿ ಕೃಷ್ಣ ದಂಪತಿಗಳ ಮನೆಯು ಶೋಚನಿಯಾವಸ್ಥೆಯಲ್ಲಿದ್ದು, ಅಲ್ಲದೇ ಮುಪ್ಪಿನ ಕಾಲದಲ್ಲಿ ದುಡಿದು ಸಾಕಾಬೇಕಾದ ಮಕ್ಕಳ ಅನಾರೋಗ್ಯ ಇನ್ನೊಂದು ಕಡೆ. ಈ ಪರಿಸ್ಥಿತಿಯಲ್ಲಿ ಕಲ್ಯಾಣಿಯವರಿಗೆ ದಿಕ್ಕು ತೋಚದ ಪರಿಸ್ಥಿತಿ ಮೂರು ಮಂದಿಯ ಚಿಕಿತ್ಸೆಯ ವೆಚ್ಚ, ಮನೆಯ ಖರ್ಚು ವೆಚ್ಚ ಹೀಗೆ ಆರ್ಥಿಕವಾಗಿ ನೊಂದ ಕುಟುಂಬಕ್ಕೆ ಸೇವೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಾಯಂಜನಿ ಯುವ ಬಳಗ ಸಂಸ್ಥಾಪಕರಾದ ರಂಜಿತ್ ಕುಮಾರ್, ಅಧ್ಯಕ್ಷರಾದ ಅಜಯ್ ರಾಜ್ ಉಪ್ಪಳ, ಸದಸ್ಯರಾದ ನವೀನ್ ಗುರಿಕಾರ, ನವೀನ್, ಟೀಮ್ ಮಂಜುಶ್ರೀ ತುಳುನಾಡ್ (ರಿ.) ಸಂಸ್ಥೆಯ ಗೌರವಾಧ್ಯಕ್ಷರು ಸದಾಶಿವ ಹೊಸಬೆಟ್ಟು ಸೇರಿದಂತೆ ಹಲವರು ಪಾಲ್ಗೊಂಡರು,
