ಡಿ. 24, : ಕ್ರಿಯೇಟಿವ್’ ಪದವಿಪೂರ್ವ ಕಾಲೇಜಿನಲ್ಲಿ‘ಕ್ರಿಯೇಟಿವ್ ಆವಿರ್ಭವ್ 2022’

ಉಡುಪಿ ಜಿಲ್ಲೆಯ ಕಾರ್ಕಳದ ಹಿರ್ಗಾನದಲ್ಲಿರುವ ‘ಕ್ರಿಯೇಟಿವ್’ ಪದವಿಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 24, 2022 ರ ಶನಿವಾರದಂದು ‘ಕ್ರಿಯೇಟಿವ್ ಆವಿರ್ಭವ್ 2022’ ಕಾಲೇಜು ವಾರ್ಷಿಕೋತ್ಸವ ‘ಸಪ್ತಗಿರಿ ಕ್ಯಾಂಪಸ್’ನಲ್ಲಿ ನಡೆಯಲಿದೆ. ಈ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಲು ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಇವರೊಂದಿಗೆ ಇನ್ನಿತರೆ ಗಣ್ಯಾತಿ ಗಣ್ಯರು ಕೂಡ ಭಾಗವಹಿಸಲಿದ್ದಾರೆ.

ಡಿಸೆಂಬರ್ 23, 2022 ರ ಶುಕ್ರವಾರದಂದು ಪ್ರತಿಭಾ ಪುರಸ್ಕಾರ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹವ್ಯಾಸಿ ಕಲಾವಿದರಿಂದ ‘ಶ್ರೀ ಹರಿ ಕಾರುಣ್ಯ’ ಯಕ್ಷಗಾನ, ಕುಂದಾಪುರದ ಅಂತರಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರಿಂದ ‘ಹಾಸ್ಯಮಯ ನಗೆ ನಾಟಕ ಪ್ರದರ್ಶನ’, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಅಭಿನಂದನೆ’ ಮತ್ತು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಭಾರತ ವೈಭವ’ ಪರಿಕಲ್ಪನೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ
