ಹತ್ತು ದಿವಸಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ : ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಶ್ನೆಗೆ ಸದನದಲ್ಲಿ ಭರವಸೆ

ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶ ವಿಳಂಬದ ಬಗ್ಗೆ ಸದನದಲ್ಲಿ ಸರಕಾರವನ್ನು ಪ್ರಶ್ನಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಫಲಿತಾಂಶ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ತನ್ನ ಹಿಂದಿನ ವರ್ಷದ ಫಲಿತಾಂಶ ತಿಳಿಯದೆ ಮುಂದಿನ ವರ್ಷಕ್ಕಾಗಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಗೊಂದಲ,ಅದೇ ರೀತಿ ಹಾಸ್ಟೆಲ್ ಗಳಲ್ಲಿ ಗೊಂದಲ ಮುಂತಾದ ವಿಚಾರಗಳ ಬಗ್ಗೆ ಸದನದಲ್ಲಿ ವಿವರಿಸಿ ಆದಷ್ಟು ಬೇಗನೇ ಫಲಿತಾಂಶ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದರು.”ಎ” ಗ್ರೇಡ್ ನಲ್ಲಿದ್ದ ಮಂಗಳೂರು ವಿವಿ ಈಗ “ಬಿ” ಗ್ರೇಡ್ ಗೆ ಬಂದು ನಿಂತಿದ್ದು ಹೀಗೆಯೇ ಮುಂದುವರಿದರೆ ಮುಂದೆ “ಸಿ” ಗ್ರೇಡ್ ಗೆ ಬಂದು ತಲುಪಬಹುದು.ಆದುದರಿಂದ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಫಲಿತಾಂಶ ವಿಳಂಬಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣರವರು ಮುಂದಿನ ಹತ್ತು ದಿನಗಳ ಒಳಗಾಗಿ ಫಲಿತಾಂಶ ಬಿಡುಗಡೆ ಮಾಡುತ್ತೇವೆಂದು ಯು.ಟಿ.ಖಾದರ್ ರವರಿಗೆ ಭರವಸೆ ನೀಡಿದರು.
