ಯೋಗಾಸನ ಚಾಂಪಿಯನ್ ಮಾನ್ವಿ ಎಸ್. ಪೂಜಾರಿ

ಶ್ರೀಮತಿ ಭಾರತಿ ಮತ್ತು ಶ್ರೀನಿವಾಸ್ ದಂಪತಿಗಳ ಪುತ್ರಿಯಾದ ಮಾನ್ವಿ ಎಸ್. ಪೂಜಾರಿ ಇವರು ಸೈಂಟ್ ಆನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕುಂಟಿಕಾನ ಮಂಗಳೂರು ನಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದು, ತನ್ನ 6ನೇ ವಯಸ್ಸಿನಲ್ಲಿ ಯೋಗದಲ್ಲಿ ಆಸಕ್ತಿ ತೋರಿ ಒಂದು ವರ್ಷದಿಂದ ಆವಿಷ್ಕಾರ್ ಯೋಗ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು ಸುಮಾರು 75 ಆಸನಗಳನ್ನು ಅವುಗಳ ಹೆಸರಿನೊಂದಿಗೆ ಗುರುತಿಸಿಕೊಂಡು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಶಿವಜ್ಯೋತಿ ಯೋಗ ಕೇಂದ್ರ,ಬೆಂಗಳೂರು ಆದಿತ್ಯ ಸಾಯಿ ಯೋಗಾ ಸೆಂಟರ್‌ ಬೆಂಗಳೂರು ಹಾಗೂ ಪಿ.ಎನ್. ಆರ್. ಯೋಗ ಕೇಂದ್ರ ಹೈದ್ರಾಬಾದ್ ಇವರುಗಳ ಸಹಯೋಗದಲ್ಲಿ ದಿನಾಂಕ 29,30,31ನೆೇ ಜುಲೈ 2022ರಂದು ನಡೆದ Dr.ರಾಜಕುಮಾರ್ ಮೆಮೋರಿಯಲ್ ಆರನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2022 ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಯೋಗಾಸನ ಮಾತ್ರವಲ್ಲದೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿದ್ದು ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್ ಇದರ ವಿದ್ಯಾರ್ಥಿನಿಯಾಗಿರುತ್ತಾರೆ ಶಾಲೆಯಲ್ಲಿಯೂ ಕಲಿಕೆಯಲ್ಲಿ ಮುಂದಿದ್ದು ಆಟ ಪಾಠ ನೃತ್ಯ, ಏಕ ಪಾತ್ರ ಅಭಿನಯ ಮುಂತಾದವುಗಳಲ್ಲಿ ಬಹುಮಾನಗಳನ್ನ ಗಳಿಸಿರುತ್ತಾರೆ.

Related Posts

Leave a Reply

Your email address will not be published.