ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ : ಶಾಲಾ ಮಕ್ಕಳೊಂದಿಗೆ ಸಂಚಾರ ಜಾಗೃತಿ ಕುರಿತು ರ್‍ಯಾಲಿ

ಮಂಗಳೂರಿನ ಕೊಟ್ಟಾರ ಚೌಕಿಯ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ ಶಾಲಾ ಮಕ್ಕಳೊಂದಿಗೆ ಸಂಚಾರ ಜಾಗೃತಿ ಕುರಿತು ರ್‍ಯಾಲಿಯನ್ನ ನಗರದ ಲಾಲ್‍ಭಾಗ್ ಜಂಕ್ಷನ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮಾಡುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ ಶಾಲಾ ಮಕ್ಕಳಿಂದ ರ್ಯಾಲಿ ನಡೆಸಲಾಯ್ತು. ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಸಹಪಠ್ಯ ಚಟುವಟಿಕೆಯ ಅಂಗವಾಗಿ ನಗರದ ಲಾಲ್‍ಭಾಗ್ ಜಂಕ್ಷನ್‍ನಲ್ಲಿ ವಿದ್ಯಾರ್ಥಿಗಳು ಬೈಕ್ ಸವಾರರಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸಿದ್ರು, ಜೊತೆಗೆ ಫ್ಲೇ ಕಾರ್ಡ್ ಮೂಲಕವೂ ಜಾಗೃತಿ ನಡೆಸಲಾಯ್ತು.

ಈ ವೇಳೆ ಮಾತನಾಡಿದ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‍ನ ಪ್ರಾಂಶುಪಾಲೆ ವನಜಾ ನಾರಾಯಣ ಸ್ವಾಮಿ, ವಿದ್ಯಾರ್ಥಿಗಳು ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳ ಜಾಗೃತಿ ಮೂಡಿಸಲಾಯ್ತು. ಪಠ್ಯಹೇತರ ಚಟುವಟಿಕೆ ಮೂಲಕ ಪ್ರತಿ ತಿಂಗಳು ಒಂದೊಂದು ವಿಷಯ ಜಾಗೃತಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪಾಂಡೇಶ್ವರ ಟ್ರಾಫಿಕ್ ಇನ್ಸ್‍ಪೆಕ್ಟರ್ ಜಯಾನಂದ ಮಾತನಾಡಿದ ಅವರು, ಮಕ್ಕಳಿಂದಲೇ ಜಾಗೃತಿ ಮೂಡಿಸಿದಾಗ, ಜನರು ಕೂಡ ಜಾಗೃತಿ ಆಗುತ್ತಾರೆ. ಮಕ್ಕಳ ಮುಖಾಂತರ ತಿಳಿಸುವುದು ಉತ್ತಮ ಬೆಳವಣಿಗೆ ಅಂತಾ ಹೇಳಿದರು.ಈ ವೇಳೆ ಶಾಲಾ ಎಜಿಎಂ ರಾಮಕೃಷ್ಣ ಭೋಗ್ಯ, ಟ್ರಾಫಿಕ್ ಎಚ್.ಸಿ ಭುವನೇಶ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‍ನ ಶಿಕ್ಷಕರು ಈ ವೇಳೆ ಭಾಗಿಯಾಗಿದ್ರು.

Related Posts

Leave a Reply

Your email address will not be published.