ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ : ಸ್ಟ್ರೆಲಿಯಂ ಟೆಕ್ನಾಲಜಿ & ಇನೋವೇಶನ್ ಸೆಂಟರ್‍ಗೆ ಚಾಲನೆ

ಮೂಡುಬಿದಿರೆ: ಹ್ಯೂಸ್ಟನ್ ಮೂಲದ ಮ್ಯಾನುಫ್ಯಾಕ್ಟರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ಸೈಲಿಯ ‘ಇಂಕ್’ ಅಂತರಾಷ್ಟ್ರೀಯ ಕಂಪೆನಿಯ ಸಹಭಾಗಿತ್ವದಲ್ಲಿ ವಿಮಾನ ತಂತ್ರಜ್ಞಾನ ಆಧಾರಿತ ‘ಸ್ಟ್ರೆಲಿಯಂ ಟೆಕ್ನಾಲಜಿ ಆಂಡ್ ಸೆಂಟರ್‍ನ್ನು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅವರು ನೂತನ ಲ್ಯಾಬ್‍ನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸ್ಟೆಲಿಯಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಣ್ ದೀಪ್ ನಂಬಿಯಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆಳ್ವಾಸ್ ನಲ್ಲಿ ಆರಂಭಗೊಂಡಿರುವ ಸ್ಟೆಲಿಯಂ ಟೆಕ್ನಾಲಜಿ ಆ?ಯಂಡ್ ಇನೋವೇಶನ್ ಸೆಂಟರ್ ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಅಪರೂಪದ ಮೈಲುಗಲ್ಲು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು, ಹೊಸ ಆವಿಷ್ಕಾರಗಳಿಗೆ ಅಳವಡಿಸಲು ಈ ಲ್ಯಾಬ್ ಒಂದು ಉತ್ತಮ ವೇದಿಕೆಯಾಗಲಿದ್ದು, ಏಷ್ಯಾ ಖಂಡವು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆರಂಭವಾಗಿದ್ದು, ನಿರ್ವಹಿಸಲಿದೆ. ತಮ್ಮ ಸಂಸ್ಥೆಗೆ. ಇದೊಂದು ಹೊಸ ಮಾರುಕಟ್ಟೆಗಳಲ್ಲಿ, ಕಂಪೆನಿಯನ್ನು ವಿಸ್ತರಿಸುವ ಯೋಜನೆ ಇದೆ’ ಎಂದರು.

ಕಾನ್‍ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಅಧ್ಯಕ್ಷ ಗೌರವ್ ಹೆಗ್ಡೆ ಮಾತನಾಡಿ, ಇಂದು ಲಾಜಿಸ್ಟಿಕ್ಸ್ ಹಾಗೂ ಈ-ಕಾಮರ್ಸ್, ಕ್ಷೇತ್ರವು ಬಹಳಷ್ಟು ಬೇಡಿಕೆ ಮತ್ತು ಅವಕಾಶಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸ್ಟೇಲಿಯಂ ಸಂಸ್ಥೆಯು ಆಟೋಮೇಶನ್ ಇಕ್ವಿಪ್ ಮೆಂಟ್ ಮೂಲಕ ಲಾಜಿಸ್ಟಿಕ್ ಹಾಗೂ ಸಪ್ರೈ ಚೈನ್ ಸೇವೆಗಳನ್ನು ಸುಗಮಗೊಳಿಸಲಿದೆ ಎಂದರು.
ಮಂಗಳೂರಿನ ಯಂಗ್’ ‘ಇಂಡಿಯಾ (ವೈಐ) ಸಂಸ್ಥೆಯ ಕೋ-ಚೇರ್ ಪರ್ಸನ್ , ಸಿಎ ಸಲೋಮಿ. ಲೋಬೋ, ಸ್ಟೆಲಿಯಂ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ನಿರ್ವಹಣಾಧಿಕಾರಿ ಮೇರಿ ಥೋಮಸ್ , ಡಿಜಿಟಲ್ ಎಂಟರ್ ಪ್ರೈಸಸ್ ನ ನಿರ್ದೇಶಕ ಕಾರ್ತಿಕ್ ಕೃಷ್ಣನ್ ,ಪ್ರಾಂಶುಪಾಲ, ಡಾ. ಪೀಟರ್ ಫೆರ್ನಾಂಡಿಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಂದ್ರಜ ಸ್ವಾಗತಿಸಿ, ನಿರೂಪಿಸಿದರು.