ನಮ್ಮೊಳಗಿನ ಬಾಂಧವ್ಯ ಹಳಸಿದಾಗ ದೈವ ದೇವಸ್ಥಾನಗಳ ಪಾತ್ರ ಮಹತ್ತರ : ಸಮಾಜ ಸೇವಕ ಸುರೇಶ್ ಶೆಟ್ಟಿ
ಮನುಷ್ಯ ಸಂಬಂಧಗಳು ದೂರವಾಗುವ ಈ ಕಾಲಘಟ್ಟದಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ನಾವೆಲ್ಲಾರೂ ಒಟ್ಟು ಸೇರ ಬೇಕು ಸಂಬಂಧಗಳು ಮತ್ತೆ ಬೆಸೆಯ ಬೇಕುಎಂಬ ದೂರ ದೃಷ್ಟಿಯಿಂದ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಬಲುದೊಡ್ಡ ಆಸ್ತಿ ಈ ದೈವ ದೇವಸ್ಥಾನಗಳು ಎಂಬುದಾಗಿ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದ್ದಾರೆ.
ಅವರು ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಂಕಲ್ಪಕ್ಕಾಗಿ ರಚಿಸಿದ ಮನವಿ ಪತ್ರವನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನವಿ ಪತ್ರವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಬಿಡುಗಡೆಗೊಳಿಸಿದರು. ಸಭೆಯ ಅಧ್ಯಕ್ಷೆತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ, ಬಿಜೆಪಿ ಪ್ರಮುಖರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಯಶ್ಪಾಲ್ ಸುವರ್ಣ, ವೆಂಕಟರಾಜ ತಂತ್ರಿ, ಯೋಗೀಶ್ ಶೆಟ್ಟಿ ಗುತ್ತಿನಾರ್, ಶಂಕರ್ ಗುರಿಕಾರ ಮುಂತಾದವರಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಶತೀಶ್ ಶೆಟ್ಟಿ ಗುಡ್ಡೆಚ್ಚಿ ನಿರ್ವಾಹಿಸಿದರು.