Home Archive by category ಕರಾವಳಿ (Page 487)

ಬಸ್‍ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆ : ವೀಡಿಯೋ ವೈರಲ್

ಪುತ್ತೂರು : ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪರ್ಸ್ ಕಳೆದುಕೊಂಡ ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಪುತ್ತೂರು ಠಾಣೆಗೆ ಸಿಸಿಟಿವಿ ದೃಶ್ಯ ಆಧರಿಸಿ ದೂರು ನೀಡಿದ್ದು, ಕಳ್ಳತನಗೈದ ಮಹಿಳೆಗಾಗಿ ಪೆÇಲೀಸರು ಹುಡುಕಾಟ

ಅಪಘಾತ ಪ್ರಕರಣಕ್ಕೆ ಕೊಲೆಗೆ ಪ್ರಚೋದನೆಯ ಸೆಕ್ಷನ್ ಅಡಿ ಬಸ್ಸು ನೌಕರರ ಬಂಧನ : ಬಸ್ಸು ನೌಕರರ ಸಂಘದಿಂದ ಪ್ರಬಲ ವಿರೋಧ

ಪಿಯುಸಿ ವಿದ್ಯಾರ್ಥಿಯೋರ್ವ ಚಲಿಸುತ್ತಿರುವ ಬಸ್ಸಿನಿಂದ ಆಕಸ್ಮಿಕ ಬಿದ್ದು ಮೃತ ಪಟ್ಟ ಪ್ರಕರಣದಲ್ಲಿ ಚಾಲಕ, ನಿರ್ವಾಹಕರನ್ನು ಕೊಲೆಗೆ ಆಸ್ಪದ ನೀಡಬಲ್ಲ ಅಪರಾಧ ಸೆಕ್ಷನ್ 304 ಅಡಿ ಬಂಧಿಸಿ ಜೈಲಿಗೆ ಕಳುಹಿಸಿರುವುದನ್ನು ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘ ತೀವ್ರವಾಗಿ ಖಂಡಿಸಿದ್ದು, ಪೊಲೀಸ್ ಇಲಾಖೆಯ ನಡೆ ದ.ಕ. ಉಡುಪಿ ಜಿಲ್ಲೆಗಳ ಖಾಸಗಿ ಬಸ್ಸುಗಳಲ್ಲಿ ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ದಿನಗೂಲಿಗೆ ದುಡಿಯುವ ಸಾವಿರಾರು ನೌಕರರಲ್ಲಿ ಆತಂಕ, ಭೀತಿ ಮೂಡಿಸಿದೆ ಎಂದು

ನ್ಯೂಯಾರ್ಕ್ ಫ್ಯಾಶನ್ ವೀಕ್ ನಲ್ಲಿ ಮಿಂಚಿದ ಕನ್ನಡತಿ ಮಮತಾ ಪುಟ್ಟಸ್ವಾಮಿ

ನ್ಯೂಯಾರ್ಕ್ ಫ್ಯಾಶನ್ ವೀಕ್ ನಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಜಗತ್ತಿನೆಲ್ಲೆಡೆಯ ಮಾಡೇಲ್ ಗಳು ಹಾತೊರೆಯುತ್ತಿರುತ್ತಾರೆ. ಇಂತಹ ಅಪೂರ್ವ ಅವಕಾಶವನ್ನು ಗಿಟ್ಟಿಸಿಕೊಂಡ ಕನ್ನಡತಿ ಬ್ಯೂಟಿ ಕ್ವೀನ್ ಹಾಗೂ ಮೊಡೇಲ್ ಮಮತಾ ಪುಟ್ಟಸ್ವಾಮಿ ಅವರು ಈ ಬಾರಿಯ ನ್ಯೂಯಾರ್ಕ್ ಫ್ಯಾಶನ್ ವೀಕ್‍ನಲ್ಲಿ ಮಿಂಚಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮಮತಾ ಪುಟ್ಟಸ್ವಾಮಿ ಅವರು ಸೆ.10 ರಂದು ನಡೆದ ರ್‍ಯಾಂಪ್ ವಾಕ್ ನಲ್ಲಿ ಪ್ರಸಿದ್ಧ ಡಿಸೈನರ್ ಅಂಜಲಿ

ಕೂಲಿ ಕಾರ್ಮಿಕನ ಜೀವ ಉಳಿಸಿ ಮಾನವೀಯತೆ ಮೆರೆದ ಆಂಬ್ಯುಲೆನ್ಸ್ ಚಾಲಕ

ಮೂಡುಬಿದಿರೆ: 41 ಘಂಟೆಗಳಲ್ಲಿ 2,700ಕಿ.ಮೀ. ಚಾಲನೆ ಮಾಡಿ ಅಸ್ವಸ್ಥ ಬಡ ಕೂಲಿ ಕಾರ್ಮಿಕನ ಜೀವ ಉಳಿಸಿ ಮಾನವೀಯತೆಯ ಸಾಹಸ ಮೆರೆದ ಐರಾವತ ಅಂಬುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ, ಚಾಲಕ ಮೂಡುಬಿದಿರೆಯ ಲಾಡಿ ನಿವಾಸಿ ಅಶ್ವತ್ಥ್ ಅವರನ್ನು ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಸೋಮವಾರ ಸಂಜೆ ಸಮ್ಮಿಲನ್ ಹಾಲ್ ನಲ್ಲಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿ ಮಂಗಳೂರು ಕೆ.ಎಂ.ಸಿಯ ಡಾ.ಮಧುಸೂಧನ್ ಉಪಾಧ್ಯ, ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರೀಫ್, ಕಾರ್ಯದರ್ಶಿ

ಉಚ್ಚಿಲದಲ್ಲಿ ಪಾನಮತ್ತರ ವಿರುದ್ಧ ಪೊಲೀಸ್ ಕ್ರಮ

ಮೇಲಾಧಿಕಾರಿಗಳ ಸೂಚನೆಯಂತೆ ಫೀಲ್ಡ್ ಗೆ ಇಳಿದ ಪಡುಬಿದ್ರಿ ಪೊಲೀಸರಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಪಡುಬಿದ್ರಿ ಎಸ್ಸೈ ಪುರುಷೋತ್ತಮ ತಂಡ ತಡರಾತ್ರಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಚರಣೆ ಆರಂಭಿಸಿದಾಗ ಬಹುತೇಕ ದ್ವಿಚಕ್ರ ಸವಾರರು ಮದ್ಯ ಸೇವನೆ ಮಾಡಿರುವುದು ಪರೀಕ್ಷೆಯಿಂದ ಕಂಡು ಬಂದಿದೆ. ಇದೀಗ ಹಲವರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತ ಪ್ರಕರಣಗಳ ಸಂಖ್ಯೆ ಈ ಪ್ರದೇಶದಲ್ಲಿ

ಪುದು ಗ್ರಾ.ಪಂ. ಪ.ಜಾತಿ, ಪಂಗಡದ ಅನುದಾನ ದುರ್ಬಳಕೆ ಆರೋಪ
ಮಂಗಳೂರು ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾ ವತಿಯಿಂದ ಪ್ರತಿಭಟನೆ

ಬಂಟ್ವಾಳ: ಪುದು ಗ್ರಾ.ಪಂ.ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನುದಾನವನ್ನು ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಮಂಗಳೂರು ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾ ವತಿಯಿಂದ ಮಂಗಳೂರು ಮಂಡಲದ ಉಪಾಧ್ಯಕ್ಷ ವಿಠಲ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಪುದು ಗ್ರಾ.ಪಂ. ಪರಿಶಿಷ್ಟರಿಗೆ ಮೀಸಲಾತಿಯ ಅನುದಾನವನ್ನು ದುರ್ಬಳಕೆ

ತಾಯಿಯ ಮಡಿಲಲ್ಲಿ ಕುಳಿತು ಆಶುಭಾಷಣದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ರಕ್ಷ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಿಕೆ- ನಾಡದ 8ನೇ ತರಗತಿಯ ವಿದ್ಯಾರ್ಥಿನಿ ಶ್ರೀರಕ್ಷ ಅಂಗ ವೈಕಲ್ಯವಿದ್ದರೂ, ತನ್ನ ತಾಯಿಯ ಮಡಿಲಲ್ಲಿ ಕುಳಿತುಕೊಂಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಆಶುಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮಾತ್ರವಲ್ಲ ತಾಲೂಕು ಮಟ್ಟದ ಪ್ರತಿಬಾಕಾರಂಜಿಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿ, ಮುಂದೆ ನಡೆಯುವ ಜಿಲ್ಲಾ ಪಟ್ಟದ ಪ್ರತಿಬಾಕರಂಜಿಗೆ ಆಯ್ಕೆಯಾಗಿರುತ್ತಾರೆ. ಇವಳ ಈ ಸಾಧನೆಗೆ ಶಿಕ್ಷಣ ಸಂಸ್ಥೆ ಮೆಚ್ಚುಗೆಯನ್ನು

ಉಡುಪಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ನಡೆದ “ನಾದಾರ್ಚನೆ” ಸಪ್ತ ಸ್ವರಗಳಲ್ಲಿ ನವ ವೈಭವ ಕಾರ್ಯಕ್ರಮ

ನವರಾತ್ರಿಯ ಅಂಗವಾಗಿ ವಿ4 ನ್ಯೂಸ್ ಉಡುಪಿ ವತಿಯಿಂದ ನಿಕ್ಸ್ ಪ್ಯೂರ್ ಸ್ಪೈಸಸ್ & ಮಸಾಲಾಸ್ ಅರ್ಪಿಸುವ “ನಾದಾರ್ಚನೆ” ಸಪ್ತ ಸ್ವರಗಳಲ್ಲಿ ನವ ವೈಭವ, ಖ್ಯಾತ ಹಾಗೂ ಉದಯೋನ್ಮುಖ ಗಾಯಕರಿಂದ ಸಂಗೀತ ಗೋಷ್ಠಿ ಕಾರ್ಯಕ್ರಮವು ಉಡುಪಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತ್ತು.ಇದರ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಶ್ರೀ ಟಿ. ರಂಗ ಪೈ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿಸುವ ಮೂಲಕ

ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗ್ರತಿ ಶಿಬಿರ

ದ. ಕ ಜಿಲ್ಲಾ ಶಾಲಾ ಮಕ್ಕಳ ಮಕ್ಕಳ ವಾಹನ ಚಾಲಕರ ಸಂಘ(ರಿ)ದ ಆಶ್ರಯದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಮಂಗಳೂರು ನಗರ ಸಂಚಾರಿ ಪೋಲಿಸ್ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗೃತಿ ಶಿಬಿರವು ಸಂಘದ ಅಧ್ಯಕ್ಷ ರಾದ ಮೋಹನ್ ಕುಮಾರ್ ಅತ್ತಾವರರವರ ಅಧ್ಯಕ್ಷತೆಯಲ್ಲಿ ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ಶಿಬಿರದಲ್ಲಿ ಮಂಗಳೂರು ನಗರ ಸಹಾಯಕ ಪೋಲಿಸ್ ಅಯುಕ್ತರಾದ ಗೀತಾ.ಟಿ.ಕುಲಕರ್ಣಿಯವರು ಮಾತನಾಡುತ್ತಾ, ಸಮಾಜದಲ್ಲಿ ಚಾಲಕರ ಪಾತ್ರ

ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಮುತಾಲಿಕ್

ದಿವಂಗತ ಪ್ರವೀಣ್ ನೆಟ್ಟಾರ್ ಮನೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷರು ಪ್ರಮೋದ್ ಮುತಲಿಕ್ ಭೇಟಿ ನೀಡಿ, ಪ್ರವೀಣ್ ತಂದೆ ತಾಯಿ ಹಾಗೂ ಪ್ರವೀಣ್ ನೆಟ್ಟಾರ್ ಧರ್ಮಪತ್ನಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರಕಾರವನ್ನು ಕಟುವಾಗಿ ಟೀಕಿಸಿ ಪ್ರವೀಣ್ ಕೊಂದ ಹಂತಕರಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.